Express News Service
ಬೆಂಗಳೂರು: 52 ವರ್ಷದ ವ್ಯಕ್ತಿಯೊಬ್ಬರು ವೈಯಕ್ತಿಕ ಬಳಕೆಗಾಗಿ ತಮ್ಮ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದಕ್ಕಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಆತನ ಜಮೀನಿನ ಮೇಲೆ ದಾಳಿ ನಡೆಸಿ ನಾಲ್ಕು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಕನಕಪುರ ಸಮೀಪದ ಹೊಸದೊಡ್ಡಿಯ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದಕ್ಕಾಗಿ ಕೋಡಿಹಳ್ಳಿ ನಿವಾಸಿ ಸಿ. ರಾಮದಾಸ ಅವರನ್ನು ಬಂಧಿಸಲಾಗಿದೆ. ರುದ್ರಾಕ್ಷಿ ಹೂವುಗಳ ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಸಿದ್ದ ಅವರು, ಅವುಗಳನ್ನು ಮರೆಮಾಚಲು ತೊಗರಿ ಗಿಡಗಳನ್ನು ಬೆಳೆಸಿದ್ದರು.
ರಾಮದಾಸ ಅವರ ಬಗ್ಗೆ ಸಿಕ್ಕ ನಿಖರ ಮಾಹಿತಿ ಆಧರಿಸಿ ಅವರ ಜಮೀನಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಯಾದರಿಗಿ: ಗಾಂಜಾ ಬೆಳೆದಿದ್ದ ಜಮೀನುಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರ ಬಂಧನ
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡಿರುವ ಗಾಂಜಾ ಗಿಡಗಳ ಬೆಲೆ ಸುಮಾರು 15,000 ರೂ. ಆಗಿದ್ದು, ಆರೋಪಿಗಳು ಮಾದಕ ವಸ್ತು ಕಳ್ಳ ಸಾಗಣೆ ದಂಧೆಯಲ್ಲಿ ತೊಡಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App