The New Indian Express
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಎಲ್ಲಾ ಎಂಟು ವಲಯಗಳಲ್ಲಿ 10 ಲಕ್ಷ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡುವ ಗುರಿಯ ಪೈಕಿ ಶೇ.90ಪ್ರತಿಶತವನ್ನು ತಲುಪಿದ್ದು, ಇದನ್ನು ಅನುಸರಿಸಿ, ಸರ್ಕಾರ ಇನ್ನೂ 5 ಲಕ್ಷ ಧ್ವಜ ಮಾರಾಟದ ಗುರಿಯನ್ನು ಹೆಚ್ಚಿಸಿದೆ.
ಈ ಕುರಿತಂತೆ TNIE ಜೊತೆ ಮಾತನಾಡಿದ ಬಿಬಿಎಂಪಿ (ಆಡಳಿತ) ವಿಶೇಷ ಆಯುಕ್ತ ಮತ್ತು ಹರ್ ಘರ್ ತಿರಂಗ ಅಭಿಯಾನದ ನೋಡಲ್ ಅಧಿಕಾರಿ ರಂಗಪ್ಪ ಅವರು, ಪಾಲಿಕೆಯು ಈಗ ಹೊಸ ಗುರಿಯನ್ನು ತಲುಪಲು ಹೆಚ್ಚು ಶ್ರಮಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರಿಗೆ ಅಷ್ಟು ದೇಶಭಕ್ತಿಯಿದ್ದರೆ ಉಚಿತವಾಗಿ ತ್ರಿವರ್ಣ ಧ್ವಜ ಹಂಚಲಿ, ಇವರು ಕೇವಲ ಪ್ರಚಾರಪ್ರಿಯರು: ಶಿವರಾಜ್ ತಂಗಡಗಿ
“ಆಗಸ್ಟ್ 11 ರ ವೇಳೆಗೆ ನಾವು ಈ ಮೊದಲು ನಿಗದಿಪಡಿಸಿದ 10 ಲಕ್ಷ ಧ್ವಜಗಳ 90 ಪ್ರತಿಶತವನ್ನು ತಲುಪಿದ್ದೇವೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಲು ಹೆಚ್ಚಿನ ಜನರನ್ನು ತಲುಪಲು ನಾವು ಕೆಲಸವನ್ನು ತೀವ್ರಗೊಳಿಸುತ್ತೇವೆ. 13ರಿಂದ 14 ಲಕ್ಷ ಧ್ವಜ ಮಾರಾಟವನ್ನು ಸುಲಭವಾಗಿ ಸಾಧಿಸುವ ವಿಶ್ವಾಸವಿದೆ’ ಎಂದು ರಂಗಪ್ಪ ಹೇಳಿದರು.
ಬಹುತೇಕ ಮನೆಗಳಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಸಂಜೆ 6 ಗಂಟೆಯ ನಂತರವೂ ತೆಗೆದಿಲ್ಲ ಎಂಬ ಗೊಂದಲದ ಬಗ್ಗೆ ಅಧಿಕಾರಿಗಳು, ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಮನೆಗಳಲ್ಲಿ ಹಾಗೂ ಬಯಲು ಜಾಗಗಳಲ್ಲಿ ಹಗಲು-ರಾತ್ರಿ ಧ್ವಜಗಳನ್ನು ಹಾರಿಸಬಹುದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ: ಸಚಿವ ಆರ್ ಅಶೋಕ್; ಶಾಸಕ ಜಮೀರ್ ವಿರುದ್ಧ ಶ್ರೀರಾಮ ಸೇನೆ ದೂರು
ಎಂಟು ವಲಯಗಳ ಮಾಲ್‌ಗಳಲ್ಲಿ ಮತ್ತು ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟದಿಂದ ಧ್ವಜದ ಗುರಿಯನ್ನು ತಲುಪಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಭಿಯಾನದ ಅಂಗವಾಗಿ ಸಾರ್ವಜನಿಕರು ಧ್ವಜಗಳನ್ನು ಖರೀದಿಸಲು ಉತ್ತೇಜಿಸಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಧ್ವಜಗಳನ್ನು ಖರೀದಿಸಿದರು.
ಭಾರತೀಯ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಎಲ್ಲಾ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಅಭಿಯಾನದಲ್ಲಿ ಭಾಗವಹಿಸಲು ಮತ್ತು ಅವರ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಗುರುವಾರ ಆಯುಕ್ತರು ಮನವಿ ಮಾಡಿದರು. ರಾಷ್ಟ್ರ ಧ್ವಜಾರೋಹಣದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: ‘ಕಾಶ್ಮೀರ್ ಫೈಲ್ಸ್’ ಸಿನಿಮಾ ಫ್ರೀಯಾಗಿ ತೋರಿಸುವ ಸರ್ಕಾರಕ್ಕೆ ರಾಷ್ಟ್ರಧ್ವಜ ಉಚಿತವಾಗಿ ನೀಡಲು ಏಕೆ ಸಾಧ್ಯವಿಲ್ಲ: ಕಾಂಗ್ರೆಸ್ ತಪರಾಕಿ
ಧ್ವಜವನ್ನು ತಲೆಕೆಳಗಾದ ಸ್ಥಿತಿಯಲ್ಲಿ ಇಡಬಾರದು ಮತ್ತು ಕೇಸರಿ ಬಣ್ಣವು ಮೇಲ್ಭಾಗದಲ್ಲಿ ಉಳಿಯಬೇಕು. ಧ್ವಜವನ್ನು ನೆಲದ ಮೇಲೆ ಎಸೆಯಬಾರದು. ಇತರ ಧ್ವಜಗಳು ಮತ್ತು ಧಾರ್ಮಿಕ ಚಿಹ್ನೆಗಳು ಮತ್ತು ಚಿತ್ರಗಳನ್ನು ಧ್ವಜದ ಮೇಲೆ ಇರಿಸಬಾರದು ಏಕೆಂದರೆ ಇದು ಶಿಕ್ಷಾರ್ಹ ಅಪರಾಧವಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App