English Tamil Hindi Telugu Kannada Malayalam Google news Android App
Thu. Mar 23rd, 2023

Online Desk

ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಿಸಬಹುದಾಗಿದೆ.

ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್ ಕಥೆ ಬರೆದು ನಿರ್ದೇಶಿಸಿದ್ದು, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ ಇತರರು ತಾರಾಂಗಣದಲ್ಲಿದ್ದಾರೆ. 

ಮೂವರು ಗಿರಿಗಳ ನೆಲೆಗಟ್ಟಿನಲ್ಲಿ ಈ ಚಿತ್ರವನ್ನು ಹೆಣೆಯಲಾಗಿದ್ದು, ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ ಈ ಮೂವರು ಅಕಸ್ಮಿಕವಾಗಿ ಸೇರಿಕೊಳ್ಳುತ್ತಾರೆ. ಈ ಮೂವರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದೇ ಚಿತ್ರದ ಮೂಲ ತಿರುಳು. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮವಾಗಿದ್ದು, ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದೇ ಸಿನಿಮಾದ ಮೂಲ ಉದ್ದೇಶವಾಗಿದೆ.

ಇದನ್ನೂ ಓದಿ: 30 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ‘ಬೆಳ್ಳಿ ಕಾಲುಂಗುರ’; ಧನ್ಯಾ ರಾಮ್ ಕುಮಾರ್ ನಾಯಕಿ

ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಬೆಂಬಲ ಪಡೆದಿರುವ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನಾವಳಿ ಕೃಷ್ಣ ನಟನೆ ಗಮನಸೆಳೆಯುತ್ತದೆ. ಇಬ್ಬರ ನಡುವಿನ ಹಾಸ್ಯ ಸಂಭಾಷಣೆ,ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಸಾಕಷ್ಟು ಮನರಂಜನೆಯಾಗಿದೆ. ಈ ಮೂವರ ನಡುವಿನ ಹಾಸ್ಯ ಭರಿತ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.

ಈ ಬಗ್ಗೆ ಮಾತನಾಡಿರುವ ನಟ ನಟ ರಿಷಭ್ ಶೆಟ್ಟಿ, ‘ನಾನು ಮೊದಲಿಗೆ ಕಥೆ ಓದಿಗಾಗಲೇ ಬೌಲ್ಡ್ ಆದೆ. ಇದೊಂದು ಹಾಸ್ಯಭರಿತ ಒಟಿಟಿಯಲ್ಲಿ ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನನಗೆ ಸಿಕ್ಕಿದ್ದ ಪಾತ್ರ ತುಂಬಾ ಸವಾಲಿನಿಂದ ಕೂಡಿತ್ತು. ವೂಟ್‌ನಲ್ಲಿ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಅಲ್ಲದೆ, ಜನರ ಪ್ರತಿಕ್ರಿಯೆ ಯಾವ ರೀತಿ ಬರುತ್ತದೆ ನೋಡಬೇಕು. ಇದೊಂದು ವಿಶೇಷ ಜರ್ನಿ. ಇಂಥ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು’ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ರಕ್ಷಿತ್ ಶೆಟ್ಟಿಯಿಂದ ಹೊಸ ಚಿತ್ರ ‘ಮಿಥ್ಯ’ ನಿರ್ಮಾಣ, ಸುಮಂತ್ ಭಟ್ ನಿರ್ದೇಶನ

‘ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಹಾಗೂ ನನ್ನ ಪಾತ್ರ ಗಿರಿಜಾ ಮನಸಿಗೆ ತುಂಬಾ ಹತ್ತಿರವಾಗಿದೆ. ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಮಾಡಿದ್ದೆ. ಪ್ರತಿಯೊಂದು ಸಂಭಾಷಣೆ, ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮನಡುವಿನ ಕೆಮಿಸ್ಟ್ರಿ ಆನ್‌ಸ್ಕ್ರೀನ್‌ನಲ್ಲಿ ತುಂಬಾ ಚೆನ್ನಾಗಿ ಬಂದಿದೆ. ವೂಟ್ ಸೆಲೆಕ್ಟ್‌ನಲ್ಲಿ ಚಿತ್ರ ನೋಡಲು ಉತ್ಸುಕನಾಗಿರುವೆ’ ಎಂದು ಚಿತ್ರದ ನಾಯಕಿ ರಚನಾ ಇಂದರ್ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ನನ್ನಂತೆಯೇ ನನ್ನ ಸಿನಿಮಾಗಳು ‘ಕ್ರೇಜಿ’; ‘ರವಿ ಬೋಪಣ್ಣ’ದಲ್ಲಿ ನನ್ನ ಹಿರಿಯ ಮಗ ಸುದೀಪ್ ನಟಿಸಿರುವುದು ಸಂತಸದ ವಿಚಾರ: ರವಿಚಂದ್ರನ್

‘ಈ ಸಿನಿಮಾ ತುಂಬಾ ವಿಶೇಷದಿಂದ ಕೂಡಿದೆ. ಸಿನಿಮಾ ಚಿತ್ರಿಕರಣದ ವೇಳೆ ಉತ್ತಮ ಅನುಭವ ಉಂಟಾಯಿತು. ಸಿನಿಮಾ ವೀಕ್ಷಿಸುವಾಗಿ ಪ್ರತಿಯೊಂದು ಸೆಕೆಂಡ್ ಕೂಡ ನಗು ತರಿಸುತ್ತದೆ. ಒಂದು ಅದ್ಭುತ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ. ಇದೊಂದು ಅದ್ಭುತ ಜರ್ನಿಯಾಗಿತ್ತು. ಸೆಟ್ಸ್‌ನಲ್ಲಿ ಸಹ ಕಲಾವಿದರೊಂದಿಗೆ ಉತ್ತಮ ಸಮಯ ಕಳೆದ್ವಿ. ಇದೀಗ ವೂಟ್ ಸೆಲೆಕ್ಟ್ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇವೆ. ಶುಕ್ರವಾರ ವೂಟ್ ಸೆಲೆಕ್ಸ್ ನೋಡಲು ಉತ್ಸಾಹದಿಂದ ಕಾಯುತ್ತಿದ್ದು, ಪ್ರೇಕ್ಷಕರೂ ಕೂಡ ಎಂಜಾಯ್ ಮಾಡುವ ವಿಶ್ವಾಸವಿದೆ. ಮೂವರ ಜರ್ನಿ ಕುರಿತು ಚಿತ್ರಿಕರಿಸಿರುವ ಈ ಚಿತ್ರದ ವೈಯಕ್ತಿಕ ಬದುಕನ್ನು ಅನಾವರಣಗೊಳಿಸಿದೆ. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *