The New Indian Express
ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,561 ಹೊಸ ಕೋವಿಡ್ ಕೇಸುಗಳು ವರದಿಯಾಗಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ. 18,053 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ದೇಶದಲ್ಲಿ 1 ಲಕ್ಷದ 23 ಸಾವಿರದ 535 ಸಕ್ರಿಯ ಪ್ರಕರಣಗಳಿದ್ದು ದಿನಂಪ್ರತಿ ಕೋವಿಡ್ ಪಾಸಿಟಿವ್ ದರ ಶೇಕಡಾ 5.44ರಷ್ಟಿದೆ.
ಇದುವರೆಗೆ ಒಟ್ಟಾರೆ ಸೋಂಕಿನಿಂದ ಗುಣಮುಖರಾಗಿ 4 ಕೋಟಿಯ 35 ಲಕ್ಷದ 73 ಸಾವಿರದ 094 ಮಂದಿ ಬಿಡುಗಡೆಗೊಂಡಿದ್ದಾರೆ. ಸೋಂಕಿಗೆ ದೇಶದಲ್ಲಿ 5 ಲಕ್ಷದ 26 ಸಾವಿರದ 928 ಮಂದಿ ಬಲಿಯಾಗಿದ್ದಾರೆ.
ಕೋವಿಡ್ ವಿರುದ್ಧ ಲಸಿಕೆ ಆರಂಭವಾದ ನಂತರ ಒಟ್ಟಾರೆಯಾಗಿ 207.47 ಕೋಟಿ ಲಸಿಕೆ ಡೋಸ್ ಗಳನ್ನು ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 17,72,441 ಡೋಸ್ ಗಳನ್ನು ಕಳೆದ 24 ಗಂಟೆಗಳಲ್ಲಿ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 3,04,189 ಲಕ್ಷ ಕೊರೋನಾ ಪರೀಕ್ಷೆ ನಡೆಸಲಾಗಿದ್ದು ಇದುವರೆಗೆ 87.95 ಕೋಟಿ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.
#AmritMahotsav#Unite2FightCorona#LargestVaccineDrive
https://t.co/KXOGE3kqkB pic.twitter.com/enKPN9Ehq2
— Ministry of Health (@MoHFW_INDIA) August 12, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App