English Tamil Hindi Telugu Kannada Malayalam Google news Android App
Tue. Mar 28th, 2023

PTI

ಶ್ರೀನಗರ: ಭಯೋತ್ಪಾದನೆಗೆ ಆರ್ಥಿಕ ನೀಡಿದ ಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಆರೋಪಿ ಬಿಟ್ಟಾ ಕರಾಟೆ ಪತ್ನಿ ಸೇರಿ 4 ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.

ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಭಯೋತ್ಪಾದನಾ ಆರೋಪ ಎದುರಿಸುತ್ತಿರುವ ಬಿಟ್ಟಾ ಕರಾಟೆ ಪ್ರಸ್ತುತ ಅಧಿಕಾರಿಗಳ ವಶದಲ್ಲಿದ್ದು,  ಭಯೋತ್ಪಾದನೆಗೆ ಆರ್ಥಿಕ ನೀಡಿದ ಸಹಾಯ ಪ್ರಕರಣದಲ್ಲಿ ಈತನ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾ ಮಾಡಿದ್ದು,  ಭಯೋತ್ಪಾದಕರ ಸಂಪರ್ಕಕ್ಕಾಗಿ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಉಗ್ರರಿಂದ ವಲಸೆ ಕಾರ್ಮಿಕನ ಹತ್ಯೆ

ಪ್ರೊಫೆಸರ್ ಮತ್ತು ಪೊಲೀಸ್ ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ವಜಾಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ವಿಚಾರಣೆಯಿಲ್ಲದೆ ಸೇವೆಯಿಂದ ವಜಾಗೊಳಿಸಲು ಸಂವಿಧಾನದ 311 (2) (ಸಿ) ವಿಧಿಯ ಅಡಿಯಲ್ಲಿ ರಚಿಸಲಾದ ಗೊತ್ತುಪಡಿಸಿದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮೂವರನ್ನು ವಜಾಗೊಳಿಸಲಾಗಿದೆ ಎನ್ನಲಾಗಿದೆ.

ವಜಾಗೊಂಡ ಮೂವರನ್ನು ಸೈಯದ್ ಅಬ್ದುಲ್ ಮುಯೀದ್, ಬಿಟ್ಟಾ ಕರಾಟೆ ಪತ್ನಿ ಅಸ್ಸಾಬಾ ಉಲ್ ಅರ್ಜಮಂಡ್ ಖಾನ್, ಡಾ ಮುಹೀತ್ ಅಹ್ಮದ್ ಭಟ್, ಮಜೀದ್ ಹುಸೇನ್ ಖಾದಿರಿ ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ 4 ದಿನ ಮುನ್ನ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, ನಾಲ್ವರು ಯೋಧರು ಹುತಾತ್ಮ

ಈ ಪೈಕಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಮತ್ತು ತಂತ್ರಜ್ಞಾನದ ವ್ಯವಸ್ಥಾಪಕ ಸೈಯದ್ ಅಬ್ದುಲ್ ಮುಯೀದ್ ಎಂಬಾತ ನಿಷೇಧಿತ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಪಾಕಿಸ್ತಾನ ಮೂಲದ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರನಾಗಿದ್ದಾನೆ.

 ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ಪ್ರಸ್ತುತ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಅಧಿಕಾರಿಯಾಗಿರುವ ಅವರ ಪತ್ನಿ ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಅವರನ್ನು ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದಲ್ಲಿ ನಿಯೋಜಿಸಲಾಗಿತ್ತು.ಇದೀಗ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. 

ಇದನ್ನೂ ಓದಿ: ದೇಶ ವಿಭಜನೆಯಿಂದ ದೂರ: ಯೂಟ್ಯೂಬ್‌ನಿಂದಾಗಿ 75 ವರ್ಷಗಳ ಬಳಿಕ ಒಂದಾದ ಭಾರತ-ಪಾಕ್ ಸಹೋದರರು!

ವಜಾಗೊಂಡ ಇತರರು ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿಭಾಗದಲ್ಲಿ ಕೆಲಸ ಮಾಡುವ ವಿಜ್ಞಾನಿ ಡಾ ಮುಹೀತ್ ಅಹ್ಮದ್ ಭಟ್; ಮತ್ತು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಹಿರಿಯ ಸಹಾಯಕ ಪ್ರಾಧ್ಯಾಪಕರಾಗಿರುವ ಮಾಜಿದ್ ಹುಸೇನ್ ಖಾದಿರಿ ಎನ್ನಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ನೂಪುರ್ ಶರ್ಮಾ ಹತ್ಯೆಗೆ ಯೋಜಿಸಿದ್ದ ಜೈಷ್-ಇ- ಮೊಹಮ್ಮದ್ ಉಗ್ರನ ಬಂಧನ

ಮಜಾಗೊಂಡ ಹುಸೇನ್ ಪಂಡಿತ್ ಅವರು ನಿಷೇಧಿತ ಜಮಾತ್-ಎ-ಇಸ್ಲಾಂ (JeI) ನೊಂದಿಗೆ ಸಕ್ರಿಯ ಸಂಬಂಧ ಹೊಂದಿದ್ದಾರೆ. ಆತ ಭಯೋತ್ಪಾದನಾ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಮತ್ತು 1993 ರಲ್ಲಿ ಭದ್ರತಾ ಪಡೆಗಳಿಂದ ಬಂಧಿಸುವ ಮೊದಲು ಮೂರು ವರ್ಷಗಳ ಕಾಲ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಸಕ್ರಿಯ ಭಯೋತ್ಪಾದಕನಾಗಿದ್ದ ಎನ್ನಲಾಗಿದೆ. ಅಲ್ಲದೆ ಜೆಐನ ಸಕ್ರಿಯ ಕೇಡರ್ ಆಗಿ ಮುಂದುವರೆದಿದ್ದ. ಭಯೋತ್ಪಾದಕ ನೇಮಕಾತಿಯಾಗಿ ಕೆಲಸ ಮಾಡಿದ್ದ. 2011 ಮತ್ತು 2014ರಲ್ಲಿ ಭಯೋತ್ಪಾದಕರ ಹತ್ಯೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ಮತ್ತು ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸುವಲ್ಲಿ ಪಂಡಿತ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *