The New Indian Express
ನವದೆಹಲಿ: ಇತ್ತೀಚಿಗೆ ಮುಕ್ತಾಯವಾದ ಕಾಮನ್ ವೆಲ್ತ್ ಗೇಮ್ಸ್ 2022ರ ಎಲ್ಲಾ ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 11 ಗಂಟೆಗೆ ತನ್ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಲಿದ್ದಾರೆ.
ಜುಲೈ 28 ರಿಂದ ಆಗಸ್ಟ್ 8 ರವರೆಗೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಬಹು ಕ್ರೀಡೆಗಳ ಕ್ರೀಡೂಕೂಟದಲ್ಲಿ ಸುಮಾರು 200 ಭಾರತೀಯ ಆಥ್ಲೀಟ್ ಗಳು 16 ವಿವಿಧ ಕ್ರೀಡೆಗಳಲ್ಲಿ ಪದಕಗಳಿಗಾಗಿ ಸ್ಪರ್ಧೆ ಮಾಡಿದ್ದರು. ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕದೊಂದಿಗೆ ಒಟ್ಟಾರೇ 61 ಪದಕ ಗೆಲ್ಲುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಕುಸ್ತಿಯಲ್ಲಿಯೇ ಭಾರತ ಹೆಚ್ಚಿನ ಪದಕ ಗಳಿಸಿದೆ. ಆರು ಚಿನ್ನ ಸೇರಿದಂತೆ 12 ಪದಕಗಳನ್ನು ಕುಸ್ತಿಯಲ್ಲಿಯೇ ಬಂದಿವೆ. ಭಾರ ಎತ್ತುವ ಸ್ಪರ್ಧೆಯಲ್ಲಿ 10 ಪದಕಗಳು ಭಾರತಕ್ಕೆ ಲಭಿಸಿದೆ. 50 ಕೆಜಿ ತೂಕದ ಮಹಿಳೆಯರ ವಿಭಾಗದ ಕುಸ್ತಿ ಪಂದ್ಯದ ಫೈನಲ್ ಪಂದ್ಯದಲ್ಲಿ ಚಿನ್ನ ಪದಕ ಗೆದ್ದ ನಂತರ ಮಾತನಾಡಿದ್ದ ಜರೀನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಮತ್ತು ತನ್ನ ಬಾಕ್ಸಿಂಗ್ ಗ್ಲೌಸ್‌ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೇನೆ ಎಂದಿದ್ದರು.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಕಳೆದ ಬಾರಿ ನಾನು ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೆ ಮತ್ತು ಈಗ ಹೊಸದನ್ನು ಬಯಸುತ್ತೇನೆ. ಕಳೆದ ಬಾರಿ, ನಾನು ನನ್ನ ಟಿ-ಶರ್ಟ್‌ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದೇ. ಈಗ ನಾನು ಅದನ್ನು ನನ್ನ ಬಾಕ್ಸಿಂಗ್ ಗ್ಲೌಸ್‌ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಆಗಸ್ಟ್ 07 ರಂದು ಚಿನ್ನ ಗೆದ್ದ ನಂತರ ನಿಕಾತ್ ಜರೀನ್ ಎಎನ್‌ಐಗೆ ತಿಳಿಸಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App