English Tamil Hindi Telugu Kannada Malayalam Google news Android App
Thu. Mar 23rd, 2023

PTI

ಮುಂಬೈ: ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವುದೇ ಇದರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

56 ವರ್ಷದ ನಟ, ತಮಿಳು ಹಿಟ್‌ಗಳಾದ “ಸೇತು”, “ಪಿತಾಮಗನ್”, “ಅನ್ನಿಯನ್”, “ರಾವಣನ್” ಮತ್ತು “ಐ” ನಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ. ಶುಕ್ರವಾರ ರಾತ್ರಿ ಸಣ್ಣ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ತಾವು ಟ್ವಿಟರ್‌ಗೆ ಪ್ರವೇಶಿಸಿರುವುದನ್ನು ಪ್ರಕಟಿಸಿದ್ದಾರೆ. ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ @chiyaan ಆಗಿದೆ.

ವಿಡಿಯೊದಲ್ಲಿ, ತಾವು ಟ್ವಿಟರ್‌ನಲ್ಲಿ ಖಾತೆ ತೆರೆಯಲು ತಡವಾಗಿದ್ದರೂ, ಚಲನಚಿತ್ರಗಳ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಅವರ ಎರಡು ಬಹು ನಿರೀಕ್ಷಿತ ಸಿನಿಮಾಗಳಾದ ಆಕ್ಷನ್ ಥ್ರಿಲ್ಲರ್ ‘ಕೋಬ್ರಾ’ ಮತ್ತು ಮಣಿರತ್ನಂ ಅವರ

‘ಪೊನ್ನಿಯಿನ್ ಸೆಲ್ವನ್- 1’ ರ ಬಿಡುಗಡೆಗೆ ಮುಂಚಿತವಾಗಿ ಅವರು ಟ್ವಿಟರ್‌ ಖಾತೆಯನ್ನು ತೆರೆದಿದ್ದಾರೆ.
ವಿಡಿಯೋದಲ್ಲಿ ತಮಿಳಿನಲ್ಲಿ ಮಾತನಾಡಿರುವ ವಿಕ್ರಮ್, ನಿರ್ಮಾಪಕ ಪಾ.ರಂಜಿತ್ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ತಿಳಿಸಿದ್ದಾರೆ.

‘ಟ್ವಿಟರ್ ನನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು, ನನ್ನ ಚಲನಚಿತ್ರಗಳ ಬಗ್ಗೆ ಮತ್ತು ಹೆಚ್ಚಿನದನ್ನು ತಿಳಿಸಲು ನನಗೆ ಅವಕಾಶ ನೀಡುತ್ತದೆ ಎಂದು ನನಗೆ ತಿಳಿಯಿತು. ನಾನು ಸುಮಾರು 15 ವರ್ಷಗಳಷ್ಟು ತಡವಾಗಿ ಬಂದಿದ್ದರೂ ಕೂಡ, ಟ್ವಿಟರ್ ಬಳಕೆಯು ಎಷ್ಟು ಪ್ರಯೋಜನ ಎಂಬುದನ್ನು ನನಗೆ ಖಂಡಿತವಾಗಿಯೂ ಮನವರಿಕೆ ಮಾಡಿದೆ. ಆದರೆ, ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

ನಟ ಇದುವರೆಗೆ ಟ್ವಿಟರ್‌ನಲ್ಲಿ 80 ಸಾವಿರಕ್ಕೂ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ, ಸದ್ಯಕ್ಕೆ ಅವರು ಯಾರನ್ನೂ ಹಿಂಬಾಲಿಸುತ್ತಿಲ್ಲ.

‘ತಮಿಳು ತಿಳಿದಿಲ್ಲದ ಜನರಿಗೆ ಮತ್ತು ಪ್ರಪಂಚದಾದ್ಯಂತ ಇರುವ ನನ್ನ ಇತರ ಸ್ನೇಹಿತರು ಮತ್ತು ಅಭಿಮಾನಿಗಳಿಗೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಂತರ ಇಲ್ಲಿಂದಲೇ ನಿಮ್ಮನ್ನು ಸಂಪರ್ಕಿಸುತ್ತೇನೆ’ ಎಂದು ಹೇಳಿದ್ದಾರೆ.

ವಿಕ್ರಮ್ ಅವರ ‘ಕೋಬ್ರಾ’ ಸಿನಿಮಾವನ್ನು ಡಿಮಾಂಟೆ ಕಾಲೋನಿ ಮತ್ತು ಇಮೈಕ್ಕಾ ನೋಡಿಗಲ್ ಖ್ಯಾತಿಯ ಆರ್. ಅಜಯ್ ಜ್ಞಾನಮುತ್ತು ಬರೆದು ನಿರ್ದೇಶಿಸಿದ್ದಾರೆ. ಇದು ಆಗಸ್ಟ್ 31 ರಂದು ತೆರೆಕಾಣಲಿದೆ.

‘ಪೊನ್ನಿಯಿನ್ ಸೆಲ್ವನ್-I’ ಅದೇ ಹೆಸರಿನ ಕಲ್ಕಿ ಕೃಷ್ಣಮೂರ್ತಿಯವರ 1955 ರ ತಮಿಳು ಕಾದಂಬರಿಯನ್ನು ಆಧರಿಸಿದೆ. ಇದು ದಕ್ಷಿಣದ ಅತ್ಯಂತ ಶಕ್ತಿಶಾಲಿ ರಾಜರಲ್ಲಿ ಒಬ್ಬರಾದ ಅರುಲ್ಮೋಳಿವರ್ಮನ್ ಅವರ ಆರಂಭಿಕ ದಿನಗಳ ಕಥೆಯನ್ನು ವಿವರಿಸುತ್ತದೆ. ಅವರು ಮಹಾನ್ ಚೋಳ ಚಕ್ರವರ್ತಿ ರಾಜರಾಜ ಚೋಳ I ಆಗಿದ್ದರು.

ಟಿತ್ರದಲ್ಲಿ ದೊಡ್ಡ ತಾರಾಂಗಣವೇ ಇದ್ದು, ಐಶ್ವರ್ಯ ರೈ ಬಚ್ಚನ್, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಂ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *