English Tamil Hindi Telugu Kannada Malayalam Google news Android App
Thu. Mar 23rd, 2023

The New Indian Express

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಸಂಖ್ಯೆ ಹೆಚ್ಚಳದ ನಡುವೆ ಐಎನ್‌ಎಸ್‌ಎಸಿಒಜಿ (ಇಂಡಿಯಾ ಸಾರ್ಸ್‌ ಕೋವ್‌ –2 ಜೆನೋಮಿಕ್‌ ಕನ್ಸೋರ್ಟಿಯಂ) ಕೋವಿಡ್-19 ರೂಪಾಂತರಗಳ ವಂಶವಾಹಿ ಸಂರಚನೆ ವಿಶ್ಲೇಷಣೆ (ಜಿನೋಮ್‌ ಸೀಕ್ವೆನ್ಸಿಂಗ್) ಯನ್ನು ಆಗಸ್ಟ್ 8 ರಂದು ನಡೆಸಲಿದೆ. 

ದೇಶಾದ್ಯಂತ ಓಮಿಕ್ರಾನ್ ನ ವಿವಿಧ ತಳಿಗಳ ಸೋಂಕು ಹರಡುತ್ತಿದ್ದು, ಇವು ಮೂಲ ಓಮಿಕ್ರಾನ್ ಗಿಂತಲೂ ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥವಾಗಿದೆ. 

ಮೂಲ ಓಮಿಕ್ರಾನ್ ಗಿಂತಲೂ ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥವಾಗಿರುವ ಹೊಸ ತಳಿಗಳು (ರೂಪಾಂತರಿಗಳು) ಹೆಚ್ಚಾಗಿ ಹರಡುತ್ತಿದೆಯಾದರೂ ಆಸ್ಪತ್ರೆ ಸೇರುವುದು ಹಾಗೂ ಸಾವಿನ ಪ್ರಮಾಣ ಈವರೆಗೂ ಕಡಿಮೆ ಇದೆ ಎನ್ನುತ್ತಾರೆ ಎನ್ ಟಿಎಜಿಐ ನ ಮುಖ್ಯಸ್ಥರಾಗಿರುವ ಡಾ. ಎನ್ ಕೆ ಅರೋರಾ.

ಇದನ್ನೂ ಓದಿ: ಹೆಚ್ಚು ವೇಗವಾಗಿ ಹರಡಬಲ್ಲ ಕೊರೊನಾ ವೈರಾಣು ರೂಪಾಂತರ ಓಮೈಕ್ರಾನ್‌ನ ಉಪತಳಿ ದೆಹಲಿಯಲ್ಲಿ ಪತ್ತೆ!

ಬಿಎ.4, ಬಿಎ.5, ಬಿಎ.2.7.5, ಬಿಎ.2.38 ಓಮಿಕ್ರಾನ್ ನ  ಉಪತಳಿಗಳಾಗಿವೆ ರೋಗದ ತೀವ್ರತೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚಾಗಿಲ್ಲ ಎಂದು ಅರೋರ ತಿಳಿಸಿದ್ದಾರೆ. 

ಈ ಹೊಸ ಉಪ-ತಳಿಯು ಈಗಾಗಲೇ ಲಸಿಕೆಯನ್ನು ತೆಗೆದುಕೊಂಡು ಪ್ರತಿಕಾಯಗಳನ್ನು ಹೊಂದಿರುವ ಜನರ ಮೇಲೆ ಕೂಡ ದಾಳಿ ಮಾಡುತ್ತದೆ’

ದೆಹಲಿಯಲ್ಲಿ ಗುರುವಾರದಂದು 2,726 ಹೊಸ ಪ್ರಕರಣಗಳು ಕಂಡುಬಂದಿದ್ದು, 6 ಮಂದು ಸಾವನ್ನಪ್ಪಿದ್ದರು. ಪಾಸಿಟಿವಿಟಿ ದರ ಶೇ.14.38 ರಷ್ಟಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *