Online Desk
ಡಾ ರಾಜ್ ಕುಮಾರ್ ಅವರ ಮೊಮ್ಮಗಳು ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಪುತ್ರಿ ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸುತ್ತಿರುವ ‘ಬೆಳ್ಳಿ ಕಾಲುಂಗುರ’ ಚಿತ್ರಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಮುಹೂರ್ತ ನೆರವೇರಿತು.
ಇಡೀ ರಾಜ್ ಕುಮಾರ್ ಕುಟುಂಬ ಸದಸ್ಯರು ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿತ್ರಕ್ಕೆ ಸಾ ರಾ ಗೋವಿಂದ್ ಅವರು ಬಂಡವಾಳ ಹೂಡುತ್ತಿದ್ದು ಎಚ್ ವಾಸು ನಿರ್ದೇಶನ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಚಿತ್ರಕ್ಕೆ ಕ್ಲಾಪ್ ನೀಡಿದರು. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರಕ್ಕೆ ಕ್ಲಾಪ್ ಮಾಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾ ರಾ ಗೋವಿಂದ್ ಅವರು ನಮ್ಮ ಜಿಲ್ಲೆಯವರು, ಆತ್ಮೀಯರು. ಅವರು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ಮುಹೂರ್ತ ನೆರವೇರಿಸಿದೆ. ಚಿತ್ರಕ್ಕೆ ಗೆಲುವಾಗಲಿ ಎಂದು ಹಾರೈಸಿದರು.
.@DhanyaRamkumar to star in #HVasu‘s upcoming directorial #BelliKalungura to be produced #SaRaGovindu pic.twitter.com/2k7GF4QtrT
— A Sharadhaa (@sharadasrinidhi) August 11, 2022
ಇನ್ನು ಮುಖ್ಯಮಂತ್ರಿ ಬೊಮ್ಮಾಯಿಯವರ ಹೇಳಿಕೆಗೆ ರಾಜಕೀಯವಾಗಿ ಪ್ರತಿಕ್ರಿಯಿಸಿದ ಸಿದ್ದರಾಂಯ್ಯ ಇಷ್ಟು ದಿನ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಗುರುತಿಸಿಕೊಳ್ಳುವಂತಹ ಕೆಲಸವೇನೂ ಮಾಡಿಲ್ಲ, ಇನ್ನು ಮುಂದೆ ಮಾಡುತ್ತಾರೆಯೇ, ಅವರು ಆರ್ ಎಸ್ಎಸ್ ನ ಕೈಗೊಂಬೆ ಎಂದು ಟೀಕಿಸಿದರು.
ಇನ್ನು ವಾಟಾಳ್ ನಾಗರಾಜ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಈ ನಾಡು ಕಂಡ ಅಪ್ರತಿಮ ಹೋರಾಟಗಾರ ವಾಟಾಳ್ ನಾಗರಾಜ್. ನಮ್ಮ ನಾಯಕರು ಎಂದು ನಾನು ಅವರನ್ನು ಕರೆಯುತ್ತೇನೆ, ವಯಸ್ಸಿನಲ್ಲಿ ನನಗಿಂತ ಕೊಂಚ ದೊಡ್ಡವರು, ವಿದ್ಯಾರ್ಥಿದೆಸೆಯಲ್ಲಿ ನಾನು ಅವರ ಭಾಷಣ ಕೇಳಲು ಟೌನ್ ಹಾಲ್ ನಲ್ಲಿ ಹೋಗುತ್ತಿದ್ದೆ. ಅವರ ವಯಸ್ಸನ್ನು ಯಾರಿಗೂ ಹೇಳುವುದಿಲ್ಲ. ಗುಟ್ಟಾಗಿ ಕಾಪಾಡಿಕೊಂಡಿದ್ದಾರೆ. ಆರೋಗ್ಯ ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೊಗಳಿದರು.
ಇನ್ನು ಬೆಳ್ಳಿಕಾಲುಂಗುರ ಚಿತ್ರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಚಿತ್ರದ ಹೀರೋ ಸಮರ್ಥ್ ಮತ್ತು ಹೀರೋಯಿನ್ ಧನ್ಯ ಅವರಿಗೆ ಚಿತ್ರದಿಂದ ಯಶಸ್ಸು ಸಿಗಲಿ. ಈ ಶೀರ್ಷಿಕೆ ಹೆಸರಿನಲ್ಲಿ ಮೂವತ್ತು ವರ್ಷಗಳ ಹಿಂದೆ ಚಿತ್ರ ತೆರೆಕಂಡು ಯಶಸ್ಸು ಆಗಿತ್ತು. ಈಗ ಮತ್ತೆ ಬೆಳ್ಳಿಕಾಲುಂಗುರ ತೆರೆಯ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ ಎಂದರು.
ಸಾ.ರಾ. ಗೋವಿಂದು ನಿರ್ಮಾಣದ ಬೆಳ್ಳಿ ಕಾಲುಂಗುರ ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿ, ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ. 1/2 pic.twitter.com/LaU1ckcCea
— Siddaramaiah (@siddaramaiah) August 12, 2022
ಡಾ ರಾಜ್ ಕುಮಾರ್ ನಮ್ಮ ಜಿಲ್ಲೆಯವರೇ ಆಗಿದ್ದು, ಅವರ ಸಿಂಗನಲ್ಲೂರು ಚಾಮರಾಜನಗರ ಪಾಲಾಗಿದೆ. ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದು ನಮಗೆಲ್ಲ ಹೆಮ್ಮೆ ಎಂದರು. ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು, ಪುನೀತ್ ಇತ್ತೀಚಿನ ವರ್ಷಗಳಲ್ಲಿ ಕಲಾವಿದರಾಗಿ ಬೆಳೆದರು. ಅವರು ನಿಧನರಾದಾಗ ಈ ನಾಡಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸದಸ್ಯರೊಬ್ಬರು ಕಾಲವಾದ ರೀತಿಯಲ್ಲಿ ಭಾವಿಸಿಕೊಂಡಿದ್ದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App