English Tamil Hindi Telugu Kannada Malayalam Google news Android App
Thu. Mar 23rd, 2023

The New Indian Express

ಬೆಂಗಳೂರು: ಆರನೇ ವೇತನ ಆಯೋಗದ ಅವಧಿ ಮುಕ್ತಾಯಗೊಂಡಿದ್ದು, ಸರ್ಕಾರಿ ಸಿಬ್ಬಂದಿಗಳು ವೇತನ ಹೆಚ್ಚಳಕ್ಕೆ ಒತ್ತಡ ಹೇರುತ್ತಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 12 ಸಾವಿರ ಕೋಟಿ ರೂ ಹೊರೆ ಬೀಳುವ ಸಾಧ್ಯತೆ ಇದೆ.

ಹೌದು.. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದ್ದು, ಆರನೇ ವೇತನ ಆಯೋಗದ ಅವಧಿ ಜುಲೈ 31ಕ್ಕೆ ಕೊನೆಗೊಂಡಿದ್ದು, ಏಳನೇ ವೇತನ ಆಯೋಗದ ರಚನೆಯ ಮುಖ್ಯಸ್ಥರು, ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ಶೇ.20 ರಿಂದ 30 ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಅಂದರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ 12,000 ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ನಾಳೆಯಿಂದ ಆ.25ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಕೆಎಸ್ ಆರ್ ಟಿಸಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ವಿಶೇಷವಾಗಿ ಚುನಾವಣಾ ವರ್ಷದಲ್ಲಿ ನೌಕರರ ಬೇಡಿಕೆಯನ್ನು ನಿರ್ಲಕ್ಷಿಸಲು ಸರ್ಕಾರಕ್ಕೆ ಸಾಧ್ಯವಾಗದ ಕಾರಣ ಈ ಬೃಹತ್ ಮೊತ್ತವನ್ನು ತೂಗಿಸುವುದು ದೊಡ್ಡ ಸವಾಲಾಗಿದೆ. ಅವರ ಬೇಡಿಕೆಗೆ ಅನುಗುಣವಾಗಿ ವೇತನವನ್ನು ಪರಿಷ್ಕರಿಸಿದರೆ, ನೌಕರರಿಗೆ ಕೇಡರ್‌ಗೆ ಅನುಗುಣವಾಗಿ 10,000 ರಿಂದ 50,000 ರೂ. ವರೆಗೆ ವೇತನ ಹೆಚ್ಚಿ,ಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

2017ರಲ್ಲಿ, ಆಗಿನ ರಾಜ್ಯ ಸರ್ಕಾರವು ಮಾಜಿ ಐಎಎಸ್ ಅಧಿಕಾರಿ ಎಂಆರ್ ಶ್ರೀನಿವಾಸ ಮೂರ್ತಿ ಅವರನ್ನು ಆರನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮೊದಲ ವೇತನ ಆಯೋಗವನ್ನು 1966 ರಲ್ಲಿ ರಚಿಸಲಾಗಿತ್ತು. 

ಇದನ್ನೂ ಓದಿ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಗೆ ಕೆಎಂಎಫ್ ನೌಕರರು: ಹೈಕೋರ್ಟ್ ಮಹತ್ವದ ಆದೇಶ

ಈ ಕುರಿತು TNIE ಯೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಅವರು, ‘2017 ರಲ್ಲಿ, ಆರನೇ ವೇತನ ಆಯೋಗವು ಮೂಲ ವೇತನದಲ್ಲಿ ಶೇ.29 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ವೇತನ ಪರಿಷ್ಕರಣೆ ಐದು ವರ್ಷಕ್ಕೊಮ್ಮೆ ಮಾಡಬೇಕು’ ಎಂದರು. ಕೇಂದ್ರ ಸರ್ಕಾರ ಮತ್ತು ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯ ಸರ್ಕಾರಿ ನೌಕರರಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ’
“ನಾವು ಮೂಲ ವೇತನ ಮತ್ತು ಡಿಎಯಲ್ಲಿ ಶೇಕಡಾ 50 ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಸುಮಾರು 2.6 ಲಕ್ಷ ಹುದ್ದೆಗಳು ಖಾಲಿಯಿದ್ದರೂ, ಅಭಿವೃದ್ಧಿಯ ವಿಷಯದಲ್ಲಿ ನಾವು ಅಗ್ರ ಐದು ರಾಜ್ಯಗಳಲ್ಲಿದ್ದೇವೆ. ಸಿಬ್ಬಂದಿ ಕೊರತೆಯಿಂದ ನಮ್ಮ ಕೆಲಸದ ಹೊರೆ ಹೆಚ್ಚುತ್ತದೆ ಎಂದು ಷಡಕ್ಷರಿ ಹೇಳಿದ್ದಾರೆ. 

ಅಲ್ಲದೆ ಚುನಾವಣಾ ವರ್ಷದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ, ಮತಗಟ್ಟೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಮತ್ತು ನೌಕರರಿಂದ ಸರ್ಕಾರ ಘೋಷಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮುಂತಾದ ಕೆಲಸಗಳು ನಡೆಯುತ್ತವೆ. ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡವಿದೆ’ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮೀಸಲಿಟ್ಟಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಕ್ಷುಲ್ಲಕ ದೂರುಗಳು: ಮೂವರಿಗೆ ಉಪಲೋಕಾಯುಕ್ತ ಎಚ್ಚರಿಕೆ

ಮತ್ತೊಂದೆಡೆ, ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಗಳ ಅಡಿಯಲ್ಲಿ ಹಣ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ. ಹೊಸ ಆಯೋಗದ ರಚನೆ ಮತ್ತು ಪ್ರಾಥಮಿಕ ವರದಿಯ ಸಲ್ಲಿಕೆಗೆ ಮೂರರಿಂದ ನಾಲ್ಕು ತಿಂಗಳಿಗಿಂತ ಕಡಿಮೆಯಿಲ್ಲ. ಘೋಷಣೆಯ ನಂತರ, ಸರ್ಕಾರವು ಬಜೆಟ್‌ನಲ್ಲಿ ಹಣವನ್ನು ಮೀಸಲಿಡುತ್ತದೆ ಮತ್ತು ಬಾಕಿ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದಲ್ಲಿ ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ ಮತ್ತು ಇತರ ಇಲಾಖೆಗಳನ್ನು ಒಳಗೊಂಡ 72 ಇಲಾಖೆಗಳಿವೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ವ್ಯತ್ಯಾಸ ಹೀಗಿದೆ
ಗುಂಪು ಡಿ: ರೂ 8,000-ರೂ 10,000
ಗುಂಪು ಸಿ: ರೂ 15,000-ರೂ 22,000
ಗುಂಪು ಬಿ: ರೂ 25,000-ರೂ 35,000
ಗುಂಪು ಎ: ರೂ 35,000-ರೂ 50,000

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *