The New Indian Express
ಹುಬ್ಬಳ್ಳಿ: ಆಗಸ್ಟ್ 6 ರಂದು ವರದಿಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯ ಅಪಹರಣ ಪ್ರಕರಣವನ್ನು ಬೇಧಿಸಿರುವ ಹುಬ್ಬಳ್ಳಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿಯು ತನ್ನ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗೋಕುಲ್ ರಸ್ತೆಯಲ್ಲಿ ಘಟನೆ ವರದಿಯಾಗಿದೆ. ಅಪಹರಣಕಾರರಿಗೆ ವಿದ್ಯಾರ್ಥಿ ಪರಿಚಯವಿದ್ದ ಕಾರಣ ಆತನನ್ನು ಕರೆದುಕೊಂಡು ಹೋಗಲು ಯಾವುದೇ ತೊಂದರೆಯಾಗಲಿಲ್ಲ.
ನಗರದ ಮಂಟೂರು ರಸ್ತೆಯ ನಿವಾಸಿ ಗರೀಬ್ ನವಾಜ್ ಮುಲ್ಲಾ (21) ಎಂಬಾತನನ್ನು ಸುರಕ್ಷಿತವಾಗಿ ಕುಟುಂಬದೊಂದಿಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 6 ರಂದು ಸಂಜೆ ಕಿಡ್ನಾಪ್ ಆದ ಕೂಡಲೇ ವಿದ್ಯಾರ್ಥಿಯ ಸಹೋದರ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಭು ರಾಮ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದು, ಘಟನೆ ನಡೆದ ಒಂದು ದಿನದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ತಂಡಗಳು ಯಶಸ್ವಿಯಾಗಿದ್ದವು. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಅಬ್ದುಲ್ ಕರೀಂ, ಇಮ್ರಾನ್ ಬಂಗಾಡಿವಾಲೆ, ತೌಸಿಫ್ ಕತ್ವಾಲೆ, ಹುಸೇನಸಾಬ್ ಮಕಾಂದರ್, ಮಹಮ್ಮದ್ ರಜಾಕ್, ಆರೀಫ್ ದಾಸ್ತಿಕೊಪ್ಪ ಮತ್ತು ಇಮ್ನು ಅಲಿಯಾಸ್ ಇಮ್ರಾನ್ ಎಂಬ ಅಾರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ಸಂತ್ರಸ್ತ ವಿದ್ಯಾರ್ಥಿ ಗರೀಬ್ ನವಾಜ್ ಮುಲ್ಲಾ ತನ್ನ ಸ್ನೇಹಿತ ದಿಲಾವರ್ ಜೊತೆ ಹುಬ್ಬಳ್ಳಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಪೇಯಿಂಗ್ ಗೆಸ್ಟ್ ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗರೀಬ್ ಮತ್ತು ದಿಲಾವರ್ ಇಬ್ಬರೂ ಆನ್‌ಲೈನ್ ಕ್ಯಾಸಿನೊಗಳನ್ನು ಆಡುತ್ತಿದ್ದರು, ಇದರಲ್ಲಿ ದಿಲಾವರ್ ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕೆಎಎಸ್ ಆಕಾಂಕ್ಷಿಗೆ 59.50 ಲಕ್ಷ ರೂ. ಮೋಸ, ವಂಚಕನ ಬಂಧನ
ದೊಡ್ಡ ಮೊತ್ತದ ಹಣವನ್ನು ಪಡೆಯಲು ದಿಲವಾರ್ ತನ್ನ ಬಳಿ ಇಲ್ಲದ ಚಾಲ್ತಿ ಖಾತೆ ಸಂಖ್ಯೆಯನ್ನು ನೀಡಬೇಕಾಗಿತ್ತು. ಹೀಗಾಗಿ ವಿದ್ಯಾನಗರದ ಅಬ್ದುಲ್ ಕರೀಂ ಅವರ ಸಹಾಯ ಕೋರಿದ್ದ.
ಕರೀಂ ಹುಬ್ಬಳ್ಳಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಹೀಗಾಗಿ ಪರಿಚಯವಿದ್ದ ಕರೀಂ ಬಳಿ ಹಣವನ್ನು ಠೇವಣಿ ಮಾಡಿದ್ದ. ನಂತರ ದಿಲಾವರ್ ಕರೀಮ್ ಖಾತೆಯಿಂದ ದೊಡ್ಡ ಮೊತ್ತದ ಹಣವನ್ನು ಹಿಂತೆಗೆದುಕೊಂಡರು, ಇದರಿಂದ ಆತನನ್ನು ಅಪಹರಿಸಬೇಕೆಂಬ ಕೆಟ್ಟ ಆಲೋಚನೆ ಕರೀಂ ತಲೆಯಲ್ಲಿ ಬಂತು.
ಇದಕ್ಕಾಗಿ, ಕರೀಂ ಹುಬ್ಬಳ್ಳಿಯ ವಿವಿಧೆಡೆ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತರನ್ನು ಕರೆಸಿ ದಿಲಾವರ್‌ನನ್ನು ಅಪಹರಿಸಲು ಯೋಜನೆ ರೂಪಿಸಿದ್ದ. ದಿಲಾವರ್ ಸಿಗದ ಕಾರಣ ಲಾಟರಿ ಗರೀಬ್ ಬಳಿ ಇರಬಹುದೆಂದು ಭಾವಿಸಿ ಆತನನ್ನು ಅಪಹರಿಸಿದ್ದಾರೆ. ಆದರೆ ತಾವು ತಪ್ಪು ವ್ಯಕ್ತಿಯನ್ನು ಎತ್ತಿಕೊಂಡಿದ್ದೇವೆ ಎಂದು ಅರಿತ ಅಪಹರಣಕಾರರು ಗರೀಬ್ ಕುಟುಂಬಕ್ಕೆ ಕರೆ ಮಾಡಿ 15 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾಟರಿ ಮೊತ್ತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಲಾಭು ರಾಮ್ ಹೇಳಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನ ಬ್ಯಾಂಕ್ ವಿವರಗಳನ್ನು ಪರಿಶೀಲಿಸಲಾಗುವುದು. ನಾವು ಅಪಹರಣಕಾರರನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಿದ್ದೆವು, ಕೇಸ್ ದಾಖಲಿಸಿದ ಒಂಬತ್ತು ಗಂಟೆಗಳ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಅಪಹರಣಕಾರರಿಂದ ಕಾರು ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲಾಬೂರಾಮ್ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App