Online Desk
ನವದೆಹಲಿ: ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಣ್ಣ ಪುತ್ರಿಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ನಿವಾಸದಲ್ಲಿ ರಕ್ಷಾ ಬಂಧನ ಆಚರಿಸಿದ್ದಾರೆ.
ಪ್ರಧಾನಮಂತ್ರಿಯವರ ನಿವಾಸದಲ್ಲಿ ನಡೆದ ಈ ವಿಶೇಷ ರಕ್ಷಾ ಬಂಧನ ಆಚರಣೆಯಲ್ಲಿ ಭಾಗವಹಿಸಿದವರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಕೆಲಸ ಮಾಡುವ ಸ್ವಚ್ಛಗೊಳಿಸುವವರು, ಜವಾನರು, ಗಾರ್ಡನ್ ನೋಡಿಕೊಳ್ಳುವವರು, ಚಾಲಕರು ಮತ್ತು ಇತರರ ಪುಟ್ಟ ಹೆಣ್ಣುಮಕ್ಕಳು ಸೇರಿ ರಕ್ಷಾ ಬಂಧನ ಆಚರಿಸಿದ್ದಾರೆ.
#WATCH | Prime Minister Narendra Modi celebrated #RakshaBandhan with young girls today at his residence in Delhi.
This was a special Rakshabandhan as these girls were the daughters of sweepers, peons, gardeners, drivers, etc working at PMO.
(Video Source: PMO) pic.twitter.com/eSvd6gsgHb
— ANI (@ANI) August 11, 2022
ಸಂಭ್ರಮಾಚರಣೆ ಮತ್ತು ಪುಟಾಣಿ ಮಕ್ಕಳೊಂದಿಗೆ ಪ್ರಧಾನಿಯವರು ಸಂವಾದ ನಡೆಸುತ್ತಿರುವ ವಿಡಿಯೊವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಮಕ್ಕಳೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
A very special Raksha Bandhan with these youngsters… pic.twitter.com/mcEbq9lmpx
— Narendra Modi (@narendramodi) August 11, 2022
ಇದಕ್ಕೂ ಮುನ್ನ ಪ್ರಧಾನಿ ಮೋದಿ, ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ್ದರು. ‘ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು’ ಎಂದು ಅವರು ಟ್ವೀಟ್ ಮಾಡಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App