The New Indian Express
ಬೆಂಗಳೂರು: ಮಿಲಿಟರಿ ಪೊಲೀಸ್ ಪಡೆಯಲ್ಲಿ ಸಾಮಾನ್ಯ ಕರ್ತವ್ಯ ವಿಭಾಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ ಅಗ್ನಿಪಥ್ ನೇಮಕಾತಿ ರ್ಯಾಲಿಯು ಬೆಂಗಳೂರಿನ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನವೆಂಬರ್ 1 ರಿಂದ 3 ರವರೆಗೆ ನಡೆಯಲಿದೆ.
ಕರ್ನಾಟಕ, ಮಾಹೆ, ಕೇರಳ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದಿಂದ ಸ್ವಯಂಸೇವಕ ಮಹಿಳಾ ಅಭ್ಯರ್ಥಿಗಳಿಗಾಗಿ ಹೆಚ್‌ಕ್ಯು ನೇಮಕಾತಿ ವಲಯ ಬೆಂಗಳೂರು ಆಶ್ರಯದಲ್ಲಿ ನೇಮಕಾತಿ ಕಚೇರಿ (ಹೆಚ್‌ಕ್ಯೂ) ಬೆಂಗಳೂರು ಈ ನೇಮಕಾತಿ ರ್ಯಾಲಿಯನ್ನು ನಡೆಸುತ್ತದೆ.
ಭಾರತೀಯ ಸೇನೆಯಲ್ಲಿ ಸೇನಾ ಪೊಲೀಸ್ ಕಾರ್ಪ್ಸ್‌ನಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆಯರು) ನೋಂದಣಿಗಾಗಿ ರ್ಯಾಲಿಯನ್ನು ನಡೆಸಲಾಗುತ್ತಿದೆ. ವಯಸ್ಸು, ಶಿಕ್ಷಣ ಅರ್ಹತೆ ಮತ್ತು ದಾಖಲಾತಿಗಾಗಿ ಇತರ ಮಾನದಂಡಗಳ ವಿವರಗಳನ್ನು 7 ಆಗಸ್ಟ್ 2022 ರಂದು ಪ್ರಧಾನ ಕಛೇರಿ ನೇಮಕಾತಿ ವಲಯ, ಬೆಂಗಳೂರು ಪ್ರಕಟಿಸಿದ ಅಧಿಸೂಚನೆಯಲ್ಲಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ: ಐಎಎಫ್ ಗೆ ಈ ವರೆಗೂ ದಾಖಲೆಯ 7.5 ಲಕ್ಷ ಅರ್ಜಿ; ನೇಮಕಾತಿ ಪ್ರಕ್ರಿಯೆ ಇತಿಹಾಸದಲ್ಲೇ ಗರಿಷ್ಠ!
ಆನ್‌ಲೈನ್ ನೋಂದಣಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 7 ರವರೆಗೆ ತೆರೆದಿರುತ್ತದೆ. joinindianarmy.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ. ಯಶಸ್ವಿಯಾಗಿ ನೋಂದಾಯಿಸಿದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಅವರ ನೋಂದಾಯಿತ ಇಮೇಲ್‌ಗೆ ಅಕ್ಟೋಬರ್ 12 ಮತ್ತು 31 ರ ನಡುವೆ ಕಳುಹಿಸಲಾಗುತ್ತದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App