English Tamil Hindi Telugu Kannada Malayalam Google news Android App
Thu. Mar 23rd, 2023

The New Indian Express

ಮೈಸೂರು: ಜೀವನದಲ್ಲಿ ಕಟ್ಟಿಕೊಳ್ಳುವ ಕನಸು ಒಬ್ಬರ ಜೀವನದಲ್ಲಿ ಏನನ್ನು ಬೇಕಾದರೂ ಬದಲಾವಣೆ ಮಾಡಬಹುದು ಎಂದು ಚಿತ್ರ ನಟ ಯಶ್ ಹೇಳಿದ್ದಾರೆ. 

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವಜನೊತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ, ನೆಚ್ಚಿನ ನಟ ಸೂಪರ್ ಸ್ಟಾರ್ ಯಶ್ ರನ್ನು ನೆರೆದಿದ್ದ ಜನತೆ ಕಣ್ತುಂಬಿಕೊಂಡರು.
 
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ವಿವಿಯಿಂದ ಯುವಜನೋತ್ಸವ ಕಾರ್ಯಕ್ರಮವನ್ನು ಆ.11 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ವಿವಿಯಷ್ಟೇ ಅಲ್ಲದೇ ಬೇರೆ ಬೇರೆ ಕಾಲೇಜು, ಪದವಿ ಕಾಲೇಜುಗಳ ವಿದ್ಯಾರ್ಥಿಗಳೂ ಆಗಮಿಸಿದ್ದರು. 

ಯುವಜನರನ್ನುದ್ದೇಶಿಸಿ ಮಾತನಾಡಿದ ಯಶ್, ಒಬ್ಬ ವ್ಯಕ್ತಿ ಕಟ್ಟುವ ಕನಸುಗಳು ಆತನ ಜೀವನದಲ್ಲಿ ಏನನ್ನು ಬೇಕಾದರೂ ಬದಲಾಯಿಸಬಹುದು, ಬಲವಾದ ಗುರಿ ಹೊಂದಿರಬೇಕು. ಒಬ್ಬ ವ್ಯಕ್ತಿಯ ಜೀವನದಲ್ಲಿ ಏನನ್ನಾದರೂ ಸಾಧಿಸಲು ಉತ್ತಮ ಸಮರ್ಪಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾನು ಕಿರಿಯ ವಯಸ್ಸಿನಲ್ಲಿ ನನ್ನ ಪೋಷಕರಿಗೆ ಹೆಚ್ಚು ಸಂತಸ ನೀಡಲಿಲ್ಲ, ಪ್ರಮುಖವಾಗಿ ವಿದ್ಯಾರ್ಥಿ ಜೀವನದಲ್ಲಿ ನಗರದಾದ್ಯಂತ ಅಡ್ಡಾಡುತ್ತಿದ್ದೆ. 

ಇದನ್ನೂ ಓದಿ: ಭಾರತವನ್ನು ಮುಂದಿನ 25 ವರ್ಷಗಳಲ್ಲಿ ಮಹಾನ್ ಶಕ್ತಿಯಾಗಿ ಪರಿವರ್ತಿಸಲು ಕೆಲಸ ಮಾಡಿ: ಯುವಕರಿಗೆ ಸಿಎಂ ಬೊಮ್ಮಾಯಿ ಕರೆ

ಆದರೆ ನಾನು ಮಾಡಿಕೊಂಡ ಸಣ್ಣ ಬದಲಾವಣೆಗಳು ನನ್ನ ಬೆಳವಣಿಗೆಗೆ ಸಹಕಾರಿಯಾಯಿತು. ಆ ಬದಲಾವಣೆಗಳಿಂದಲೇ ನಾನು ಇಂದು ಇಲ್ಲಿದ್ದೇನೆ. ಅದೇ ಕಾರಣದಿಂದಲೇ ಜನ ನನ್ನ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ ಎಂದು ಯಶ್ ಹೇಳಿದ್ದಾರೆ. 

ಕೆಜಿಎಫ್ ನ ಯಶಸ್ಸಿನ ಉದಾಹರಣೆ ನೀಡಿರುವ ಯಶ್, ಕನ್ನಡ ಸಿನಿಮಾ ದೇಶದ ಸಿನಿಮಾ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಸದ್ದು ಮಾಡುತ್ತದೆ ಎಂದು ಯಾರಾದರೂ ನಿರೀಕ್ಷಿಸಿದ್ದರಾ, ನಾವು ಸಕಾರಾತ್ಮಕವಾಗಿರಬೇಕಷ್ಟೇ, ದೊಡ್ಡ ಕನಸುಗಳನ್ನು ಹೊಂದಿರಬೇಕು ಎಂದಿದ್ದಾರೆ ಯಶ್.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *