English Tamil Hindi Telugu Kannada Malayalam Google news Android App
Thu. Mar 23rd, 2023

PTI

ಭೋಪಾಲ್: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭೇಟಿ ವೇಳೆ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹೈಡ್ರಾಮಾ ನಡೆದಿದ್ದು, ಅವರ ಬೆಂಬಲಿಗರು ಬ್ಯಾರಿಕೇಡ್ ಮುರಿದು ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶ್ರಾವಣ ಮಾಸದ ಪ್ರಯುಕ್ತ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ತೇಜಸ್ವಿ ಸೂರ್ಯ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಅವರ ಬೆಂಬಲಿಗರಿಗೆ ಪ್ರವೇಶ ನಿರಾಕರಿಸಿದ್ದರಿಂದ ಗಲಾಟೆ ಉಂಟಾಯಿತು ಎನ್ನಲಾಗಿದೆ.

ಬಿಜೆಪಿ ಯುವ ಮೋರ್ಚಾಗೆ ಸೇರಿದ, ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರ ಬೆಂಬಲಿಗರಾದ ಕೆಲವು ಕಾರ್ಯಕರ್ತರಿಗೆ ಬುಧವಾರ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ (Ujjain Mahakaleshwar Temple) ಆವರಣದೊಳಗೆ ಪ್ರವೇಶ ನಿರಾಕರಿಸಿದ್ದರಿಂದ ದೊಡ್ಡ ಗಲಾಟೆಯೇ ನಡೆದಿದೆ. ತಮಗೆ ದೇವಸ್ಥಾನದೊಳಗೆ ಪ್ರವೇಶ ನೀಡಬೇಕೆಂದು ರೊಚ್ಚಿಗೆದ್ದ ಬಿಜೆಪಿ ಯುವ ಮೋರ್ಚಾ (Yuva Morcha) ಕಾರ್ಯಕರ್ತರು ದೇವಸ್ಥಾನದ ಬ್ಯಾರಿಕೇಡ್​​ಗಳನ್ನು ಬೀಳಿಸಿ, ಒಳಗೆ ನುಗ್ಗಿದ್ದು, ಸೆಕ್ಯುರಿಟಿಗಳ ಮೇಲೆ ಹಲ್ಲೆ ನಡೆಸಿ, ಅಲ್ಲದೆ ಅರ್ಚಕರನ್ನೂ ತಳ್ಳಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಈ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದರು. ತೇಜಸ್ವಿ ಸೂರ್ಯ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಅವರ ಹಿಂದೆ ಸೇರಿದ್ದ ಅವರ ಕೆಲವು ಬೆಂಬಲಿಗರಿಗೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ತೇಜಸ್ವಿ ಸೂರ್ಯ ಅವರ ಬೆಂಬಲಿಗರು ದೇವಾಲಯದ ಆವರಣದೊಳಗೆ ಗದ್ದಲವನ್ನು ಸೃಷ್ಟಿಸಿದರು. ಆರಂಭದಲ್ಲಿ ಭದ್ರತಾ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಬೆಂಬಲಿಗರು ನೋಡ ನೋಡುತ್ತಲೇ ಬ್ಯಾರಿಕೇಡ್ ಗಳ ಮೇಲೇರಿ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ. 

ಇದನ್ನೂ ಓದಿ: ಕೆಎಸ್ ಆರ್ ಟಿಸಿ ಆಸ್ಪತ್ರೆ ಖಾಸಗೀಕರಣಕ್ಕೆ ಸಂಸದ ತೇಜಸ್ವಿ ಸೂರ್ಯ ಯತ್ನ: ಕಾರ್ಮಿಕ ಒಕ್ಕೂಟ ಅಧ್ಯಕ್ಷ ಅನಂತ ಸುಬ್ಬಾರಾವ್

ದೇವಸ್ಥಾನದ ಆವರಣವು ಭಕ್ತರಿಂದ ತುಂಬಿ ತುಳುಕುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶ್ರಾವಣ ಮಾಸವಾದ್ದರಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಹೀಗಾಗಿ, ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವ ಉದ್ದೇಶದಿಂದ ತೇಜಸ್ವಿ ಸೂರ್ಯ ಅವರ ಬೆಂಬಲಿಗರಿಗೆ ನೇರವಾಗಿ ದೇವಸ್ಥಾನದೊಳಗೆ ಪ್ರವೇಶಿಸಲು ನಿರಾಕರಿಸಲಾಯಿತು. ಸ್ಥಳೀಯ ವರದಿಗಳ ಪ್ರಕಾರ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನೂ ತಳ್ಳಿ ಹಲ್ಲೆ ನಡೆಸಲಾಯಿತು.

ಇಬ್ಬರ ವಿರುದ್ಧ ಪ್ರಕರಣ
ದೇಗುಲದಲ್ಲಿ ಗದ್ದಲ ಎಬ್ಬಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ?’: ತೇಜಸ್ವಿ ಸೂರ್ಯ ಬೇಜವಾಬ್ದಾರಿ ಹೇಳಿಕೆಗೆ ಯು.ಟಿ. ಖಾದರ್ ಕಿಡಿ

ಮಹಾಕಾಳೇಶ್ವರ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಮತ್ತು ಶಿವಭಕ್ತರ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ, ವಿಶೇಷವಾಗಿ ಶ್ರಾವಣ ಮಾಸದಲ್ಲಿ ದೇವಸ್ಥಾನದ ಆವರಣವು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಗರ್ಭಗುಡಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳು ಮತ್ತು ವಿಐಪಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಇಂದೋರ್ ಶಾಸಕ ರಮೇಶ್ ಮೆಂಡೋಲಾ ಅವರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದ್ದರು. ಆದರೆ, ಇದಾದ ನಂತರ ದೇವಸ್ಥಾನದ ಆಡಳಿತವು ಪ್ರೋಟೋಕಾಲ್ ಅಧಿಕಾರಿ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *