PTI
ಗಾಜಿಯಾಬಾದ್: ಮದುವೆಯಾಗಲು ಒಪ್ಪದಿದ್ದಕ್ಕೆ ತನ್ನ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದವನ ಕತ್ತು ಸೀಳಿ ಕೊಂದು, ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಹಿಳೆಯನ್ನು ಪ್ರೀತಿ ಶರ್ಮಾ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ತನ್ನ ಪತಿಯಿಂದ ಬೇರ್ಪಟ್ಟು ಫಿರೋಜ್ ಅಲಿಯಾಸ್ ಚ್ವಾನಿ (23) ಎಂಬಾತನ ಜೊತೆ ವಾಸಿಸುತ್ತಿದ್ದಳು.
ಭಾನುವಾರ ತಡರಾತ್ರಿ ದಿನನಿತ್ಯದ ತಪಾಸಣೆಯ ವೇಳೆ, ಟೀಲಾ ಮಾಡ್ ಪೊಲೀಸರು ಮಹಿಳೆಯೊಬ್ಬರು ಕಪ್ಪು ಟ್ರಾಲಿ ಬ್ಯಾಗ್ ಅನ್ನು ಎಳೆದುಕೊಂಡು ಬರುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಮಹಿಳಾ ಪೇದೆಯೊಬ್ಬರು ಪರಿಶೀಲನೆ ನಡೆಸಿದಾಗ ಅದರೊಳಗೆ ಪುರುಷನ ಶವ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಮಹಿಳೆಯು ತನ್ನ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ವ್ಯಕ್ತಿಯ ದೇಹ ಎಂದು ಬಹಿರಂಗಪಡಿಸಿದಳು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್‌ಪಿ) ಮುನಿರಾಜ್ ಜಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಟರ್ ಬಾಟಲ್‌ಗಾಗಿ ವಾಗ್ವಾದ: ವ್ಯಕ್ತಿಗೆ ಥಳಿಸಿ, ಚಲಿಸುವ ರೈಲಿನಿಂದ ಹೊರಗೆ ನೂಕಿದ ಪ್ಯಾಂಟ್ರಿ ಸಿಬ್ಬಂದಿ!
ಪ್ರೀತಿ ಶರ್ಮಾ ಅವರು, ಫಿರೋಜ್ ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ, ಆತ ಬೇರೆ ಸಮುದಾಯದವರನ್ನು ಮದುವೆಯಾಗಲು ತಮ್ಮ ಪೋಷಕರು ಅನುಮತಿ ನೀಡುವುದಿಲ್ಲ ಎಂಬ ನೆಪದಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದರು. ತನ್ನನ್ನು ಮದುವೆಯಾಗುವಂತೆ ಫಿರೋಜ್‌ಗೆ ಒತ್ತಡ ಹೇರಿದಾಗ, ಆತ ಆಕೆಯನ್ನು ‘ಲಜ್ಜೆಗೇಡಿ’ ಎಂದು ಕರೆದಿದ್ದಾರೆ. ಇದರಿಂದ ಕೋಪಗೊಂಡ ಆಕೆ, ಚಾಕುವಿನಿಂದ ಆತನ ಕತ್ತು ಸೀಳಿದ್ದಾಳೆ. ಬಳಿಕ ಪ್ರೀತಿ ಶರ್ಮಾ ಟ್ರಾಲಿ ಬ್ಯಾಗ್ ಖರೀದಿಸಿ ಅದರೊಳಗೆ ಶವವನ್ನು ತುಂಬಿದ್ದರು.
ಭಾನುವಾರ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಬ್ಯಾಗ್ ಅನ್ನು ಎಸೆಯಲು ಹೋಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆರೋಪಿ ಅಪರಾಧ ಕೃತ್ಯಕ್ಕೆ ಬಳಸಿದ್ದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App