The New Indian Express
‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಚಂದ್ರಿಕಾ ಎಂಬ ವಿಲನ್ ಪಾತ್ರ ಮಾಡಿ ಜನಪ್ರಿಯರಾಗಿದ್ದ ‘ಬಿಗ್ ಬಾಸ್’ ಕನ್ನಡ ಸೀಸನ್ 7 ಸ್ಪರ್ಧಿ ಪ್ರಿಯಾಂಕಾ ಶಿವಣ್ಣ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ್ದ ಪ್ರಿಯಾಂಕಾ, ಚೊಚ್ಚಲ ಸಿನಿಮಾದಲ್ಲೂ ಖಳ ಪಾತ್ರವನ್ನೇ ಮಾಡಿದ್ದಾರೆ.

ಪ್ರಿಯಾಂಕಾ ನಟಿಸುತ್ತಿರುವ ಈ ಸಿನಿಮಾದ ಹೆಸರು ‘ಫ್ಯಾಂಟಸಿ’. ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಆರ್. ಪವನ್ ಕುಮಾರ್. ಪವನ್ ಕುಮಾರ್ ಈ ಹಿಂದೆ ಸಂಹಾರ, ಅಮ್ಮ ಐ ಲವ್ ಯೂ, ದಮಯಂತಿ ಹಾಗೂ ಆದ್ಯಾ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ನಾನು ನನ್ನ ಸಿನಿಮಾ ವೃತ್ತಿಜೀವನವನ್ನು ವಿಶಿಷ್ಟ ಪಾತ್ರದೊಂದಿಗೆ ಪ್ರಾರಂಭಿಸಲು ಬಯಸಿದ್ದೆ ಹೀಗಾಗಿ ಖಳನಾಯಕಿ ಪಾತ್ರವನ್ನು ಆಯ್ಕೆ ಮಾಡಿದೆ” ಎಂದು ಪ್ರಿಯಾಂಕಾ ಶಿವಣ್ಣ ಹೇಳಿದ್ದಾರೆ. ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಬಹುತೇಕ ಚಿತ್ರೀಕರಣ ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ನಡೆದಿದೆ. ಪ್ರಿಯಾಂಕಾ ಮತ್ತು ಅನುರಾಗ್ ಪಾತ್ರಗಳು ಮುಖಾಮುಖಿಯಾಗಿ ಕಾಣಿಸಿಕೊಳ್ಳಲಿವೆ. ಇಲ್ಲಿ ಒಂದು ಸಾವಿನ ಸುತ್ತವೂ ಕಥೆ ಸಾಗಲಿದೆ. ಸಾಕಷ್ಟು ತಿರುವುಗಳಿಂದ ಕೂಡಿದ ಕಥೆ ಇಲ್ಲಿ ಇರಲಿದೆ. ಶೀರ್ಷಿಕೆಗೆ ತಕ್ಕಂತೆ ಭ್ರಮೆ ಮತ್ತು ವಾಸ್ತವದ ನಡುವಿನ ಕಥೆ ಇದಾಗಿದೆ.
ಫ್ಯಾಂಟಸಿಯಲ್ಲಿ ಬಾಲ ರಾಜವಾಡಿ, ಬಾಲ ಕಲಾವಿದ ಅನುರಾಗ್ ಎಸ್ ಪಾಟೀಲ್ ಮತ್ತು ಗೌರೀಶ್ ಅಕ್ಕಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಪಿಕೆಎಚ್ ದಾಸ್ ಅವರ ಛಾಯಾಗ್ರಹಣವಿದೆ ಮತ್ತು ಸೆಪ್ಟೆಂಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App