The New Indian Express
ಹುಬ್ಬಳ್ಳಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಆಂಧ್ರ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಪುನರಾರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಗಣಿಗಾರಿಕೆ ಚಟುವಟಿಕೆಗಳನ್ನು ಪುನಾರಂಭಿಸಲು ಅನುಮತಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಗಣಿ ಕಂಪನಿ (ಓಎಂಸಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರ ಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ತಮ್ಮ ಕಂಪನಿಗೆ ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರೆಡ್ಡಿ ಅವರು ಎಪಿಯ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಾಲ್ಕು ಗಣಿಗಳನ್ನು ಹೊಂದಿದ್ದಾರೆ. 2010ರಲ್ಲಿ ರಾಜ್ಯ ಸರ್ಕಾರ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ಇವೆಲ್ಲವನ್ನೂ ಮುಚ್ಚಲಾಯಿತು. ಕಳೆದ ಕೆಲವು ತಿಂಗಳುಗಳಿಂದ ಬಳ್ಳಾರಿಯಲ್ಲಿ ರೆಡ್ಡಿ ರಾಜಕೀಯಕ್ಕೆ ಮರುಪ್ರವೇಶಿಸಿ ಗಣಿಗಾರಿಕೆ ಪುನರಾರಂಭಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.
ಗಣಿಗಾರಿಕೆ ನಿಲ್ಲಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ವಿವಾದ ಕಾರಣವಾಗಿತ್ತು. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದ್ದು, ಅನುಮತಿ ತಡೆಹಿಡಿಯಲು ಕಾರಣಗಳಿಲ್ಲ. ಹೀಗಾಗಿ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಬೇಕು ಎಂದು ಓಎಂಸಿ ಮನವಿ ಮಾಡಿದೆ. ರೆಡ್ಡಿ ಅವರು ಓಬುಳಾಪುರಂ ಗಣಿಗಳನ್ನು ಹೊಂದಿರುವ ಅನಂತಪುರ ಜಿಲ್ಲೆಯಲ್ಲಿ ಗಣಿಗಾರಿಕೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಾನು ಇವತ್ತೇ ಮನಸ್ಸು ಮಾಡಿದ್ರೆ ಒಂದು ದಿನಕ್ಕಾದರೂ ಸಿಎಂ ಆಗುವೆ: ಜನಾರ್ದನ ರೆಡ್ಡಿ
ಬಳ್ಳಾರಿ ಮತ್ತು ಆಂಧ್ರಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಲವಾರು ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. “ನಾವು ಬಳ್ಳಾರಿಯಲ್ಲಿ ಎರಡು ರಾಜ್ಯಗಳ ನಡುವಿನ ಗಡಿ ಸಮೀಕ್ಷೆಯನ್ನು ಪ್ರಶ್ನಿಸಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದೇವೆ. ರಾಜ್ಯ ಗಡಿಗಳು ಅಸ್ತಿತ್ವದಲ್ಲಿಲ್ಲದಿದ್ದಾಗ 1896 ರ ನಕ್ಷೆಗಳ ಆಧಾರದ ಮೇಲೆ ಭಾರತೀಯ ಸಮೀಕ್ಷೆಯು ಗಡಿ ರೇಖೆಯನ್ನು ಪ್ರಸ್ತಾಪಿಸಿದೆ. ಮರು ಸಮೀಕ್ಷೆಗೆ ಒತ್ತಾಯಿಸುತ್ತಿದ್ದೇವೆ ಎಂದು ಗಣಿ ವಿರೋಧಿ ಹೋರಾಟಗಾರರು ಹೇಳಿದ್ದಾರೆ.
ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ. ಇನ್ನೊಂದೆಡೆ ಅಂತಾರಾಜ್ಯ ಗಡಿ ಒತ್ತುವರಿ ವಿಷಯದಲ್ಲಿ ಆರಂಭದಿಂದಲ್ಲೂ ಹೋರಾಟ ಮಾಡಿಕೊಂಡು ಬಂದಿರುವ ಟಿಎನ್ಆರ್ ಗಣಿ ಗುತ್ತಿಗೆಯ ಟಪಾಲ್ ಗಣೇಶ್, ಯಾವುದೇ ಕಾರಣಕ್ಕೂ ಓಎಂಸಿ ಆರಂಭವಾಗುವುದಿಲ್ಲ. ಸರ್ವೇ ಆಫ್ ಇಂಡಿಯಾದ ಸಮೀಕ್ಷೆ ವರದಿ ಸರಿಯಾಗಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಹಾಕಿರುವುದಾಗಿ ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App