PTI
ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿಯ ಲಲಿತ್‌ಪುರ ಜಿಲ್ಲೆಯಲ್ಲಿ ರೈಲ್ವೇ ಪ್ಯಾಂಟ್ರಿ ಸಿಬ್ಬಂದಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆದಿರುವ ಘಟನೆ ನಡೆದಿದೆ. ಈ ಪೈಕಿ ಒಬ್ಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
26 ವರ್ಷದ ರವಿ ಯಾದವ್ ಎಂಬಾತ ತನ್ನ ಸೋದರಿಯೊಂದಿಗೆ ರಪ್ತಿಸಾಗರ್ ಎಕ್ಸ್‌ಪ್ರೆಸ್(12591) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಜಿರೋಲಿ ಗ್ರಾಮದ ಬಳಿ ತಲುಪಿದಾಗ, ನೀರಿನ ಬಾಟಲಿಯನ್ನು ಖರೀದಿಸುವ ಮತ್ತು ಪಾನ್ ಮಸಾಲವನ್ನು ಉಗುಳುವ ಬಗ್ಗೆ ಆತನ ಮತ್ತು ಪ್ಯಾಂಟ್ರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬೆನ್ನಲ್ಲೇ ರವಿ ಯಾದವ್ ಅವರ ಸೋದರಿ ಲಲಿತ್‌ಪುರ ನಿಲ್ದಾಣದಲ್ಲಿ ರೈಲಿನಿಂದ ಇಳಿದರೂ, ಪ್ಯಾಂಟ್ರಿ ಸಿಬ್ಬಂದಿ ರವಿ ಅವರನ್ನು ಇಳಿಯಲು ಬಿಟ್ಟಿಲ್ಲ. ನಂತರ, ಅವರು ಆತನನ್ನು ಥಳಿಸಿ, ಚಲಿಸುತ್ತಿದ್ದ ರೈಲಿನಿಂದ ಮತ್ತೊಂದು ಟ್ರ್ಯಾಕ್‌ಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದ್ದು. ಅಲ್ಲಿಂದ ಸ್ಥಳೀಯರು ರವಿ ಯಾದವ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಲ್ಲಿಂದ ಆತನನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರವಿ ಯಾದವ್ ಅವರ ದೂರಿನ ಮೇರೆಗೆ ಪ್ಯಾಂಟ್ರಿ ಸಿಬ್ಬಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು), 325 (ಘೋರವಾದ ಗಾಯವನ್ನುಂಟು ಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಸರ್ಕಲ್ ಅಧಿಕಾರಿ ಮೊಹಮ್ಮದ್ ನಯೀಮ್ ತಿಳಿಸಿದ್ದಾರೆ.
ಬಂಧಿನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App