PTI
ಜೈಪುರ: ರಾಜಸ್ಥಾನದ ಸಿಕಾರ್ ಪಟ್ಟಣದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಖಾಟು ಶ್ಯಾಮ್ ಜಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಖಾಟು ಶ್ಯಾಮ್‌ಜಿ ದೇವಾಲಯದಲ್ಲಿ ಮಾಸಿಕ ಜಾತ್ರೆಯ ವೇಳೆ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಜೈಪುರ ಆಸ್ಪತ್ರೆಗೆ ದಾಖಲಿಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ದೇವಾಲಯದ ಹೊರಗೆ ಜನದಟ್ಟಣೆ ಹೆಚ್ಚು ಇದ್ದಾಗ “ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಠಾಣಾಧಿಕಾರಿ ರಿಯಾ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಕರ್ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಷ್ಟ್ರದೀಪ್ ಅವರು ತಿಳಿಸಿದ್ದಾರೆ.
ಇದನ್ನು ಓದಿ: ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಮುಂಜಾನೆ ಕಾಲ್ತುಳಿತ; ಮೂವರು ಸಾವು, ಇಬ್ಬರಿಗೆ ಗಾಯ
ದೇವಸ್ಥಾನದ ಹೊರಗೆ ಭಾರೀ ಜನಜಂಗುಳಿ ಇತ್ತು. ದೇವಸ್ಥಾನದ ದ್ವಾರ ತೆರೆಯುತ್ತಿದ್ದಂತೆಯೇ ನೂಕು ನುಗ್ಗಲು ಉಂಟಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಎಸ್‌ಎಚ್‌ಒ ರಿಯಾ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App