PTI
ನವದೆಹಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಪ್ರಕಾರ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್‌ನಲ್ಲಿ ಕನಿಷ್ಠ 24 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಮತ್ತು ಅಕ್ರಮ ವಿಧಾನಗಳನ್ನು ಬಳಸಿದ್ದಾರೆಂದು ಐದು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಜೆಇಇ- ಮುಖ್ಯ ಪರೀಕ್ಷೆಯ ಎರಡು ಸೆಷನ್ ಗಳ ಫಲಿತಾಂಶ ಸೋಮವಾರ ಪ್ರಕಟಿಸಲಾಗಿದೆ. ಶೇ. 100 ರಷ್ಟು ಅಂಕ ಗಳಿಸಿದ ಅಭ್ಯರ್ಥಿಗಳಲ್ಲಿ ಆಂಧ್ರ ಪ್ರದೇಶ (5) ಮತ್ತು ತೆಲಂಗಾಣ(5) ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ(4) ನಂತರದ ಸ್ಥಾನದಲ್ಲಿದೆ.
ಇದನ್ನು ಓದಿ: ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 25ಕ್ಕೆ ಮುಂದೂಡಿಕೆ: ಎನ್ ಟಿಎ
ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ, ಪಂಜಾಬ್, ಕೇರಳ, ಕರ್ನಾಟಕ, ಜಾರ್ಖಂಡ್‌ನಿಂದ ತಲಾ ಒಬ್ಬ ಅಭ್ಯರ್ಥಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಪ್ರಸಕ್ತ ಸಾಲಿನ ಅಂದರೆ, 2022ನೇ ಸಾಲಿನ ಜೆಇಇ ಮೇನ್ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ jeemain.nta.nic.in ನಲ್ಲಿ ಅಭ್ಯರ್ಥಿಗಳು ಫಲಿತಾಂಶ ನೋಡಬಹುದಾಗಿದೆ. ಕಳೆದ ವಾರ ಆಗಸ್ಟ್ 3 ರಂದು ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್ ಅನ್ನು ಬಿಡುಗಡೆ ಮಾಡಲಾಗಿತ್ತು.
For more news update stay with actp news
Android App
Facebook
Twitter
Dailyhunt
Share Chat
Telegram
Koo App