Online Desk
ನಟ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾರೆಂದು ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘2020 ರಲ್ಲಿ ಧ್ರುವನ್ ನಾಯಕ ನಟನನ್ನಾಗಿಸಿಕೊಂಡು ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾ ಪ್ರಾರಂಭಿಸಿದೆ. ಕೆಲವು ದಿನಗಳ ಬಳಿಕ ದರ್ಶನ್ ಅವರು ಕರೆ ಮಾಡಿ ಬೇರೆ ಕತೆಯೊಂದನ್ನು ಸೂಚಿಸಿ ಆ ಕತೆಯನ್ನು ಸಿನಿಮಾ ಮಾಡುವಂತೆ ಹೇಳಿದರು. ದರ್ಶನ್ ಹಾಗೂ ನಟ ಧ್ರುವನ್ ಸೇರಿ ನಿರ್ದೇಶಕರನ್ನೂ ಬದಲಿಸಿದರು. ನಾನೂ ಸಹ ಒಪ್ಪಿಕೊಂಡೆ ಆದರೆ ಕಾರಣಾಂತರಗಳಿಂದ ಸಿನಿಮಾದ ಚಿತ್ರೀಕರಣ ತಡವಾಯಿತು” ಎಂದಿದ್ದಾರೆ.
‘ಆಗಸ್ಟ್ ತಿಂಗಳ ವೇಳೆಗೆ ನನಗೆ ಕರೆ ಮಾಡಿದ ದರ್ಶನ್, ಇವನ (ಧ್ರುವನ್) ಜೀವನ ನೀನು ಹಾಳು ಮಾಡುತ್ತಿದ್ದೀಯ. ನೀನು ಹೀಗೆ ಸಿನಿಮಾ ತಡ ಮಾಡಿದರೆ, ಅವನ ಕೆರಿಯರ್ ಅನ್ನು ಯಾರು ನೋಡ್ತಾರೆ. ನೀನು ಬರ್ತೀಯ? ಎಲ್ಲಾ ನೋಡ್ಕೊಂಡು ತಾನೇ ಮಾಡ್ಬೇಕು. ಸಿನಿಮಾ ಅನೌನ್ಸ್ ಮಾಡಿದೀಯ ಅದನ್ನು ಮುಗಿಸಬೇಕು. ಇಲ್ಲ ಅಂದ್ರೆ ನೀನು ಇರಲ್ಲ. ಏನಾದ್ರೂ ಮಾಡಬೇಕು ಅಂದ್ರೆ ಹೇಳಿಬಿಟ್ಟೇ ನಾನು ಮಾಡೋದು.
ಇದನ್ನೂ ಓದಿ: ದರ್ಶನ್-ತರುಣ್ ಸುಧೀರ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ‘ಕನಸಿನ ರಾಣಿ’ ಮಾಲಾಶ್ರೀ ಮಗಳು ನಾಯಕಿ!
ನೀನು ರೆಡಿ ಇರು. ಎಲ್ಲಾದರೂ ಕಂಡಾಗ ಏನಪ್ಪ ಅಂತ ಮಾತನಾಡೋ ಥರ ಇಟ್ಕೋ, ಇಲ್ಲ ಅಂದ್ರೆ ನೀನೇ ಕಾಣ್ದೇ ಇರೋ ಥರ ಮಾಡಿ ಬಿಡ್ತೀನಿ. ಇದನ್ನ ವಾರ್ನಿಂಗ್ ಅಂತ ಬೇಕಾದ್ರೂ ಅನ್ಕೊ’ ಅಂತ ದರ್ಶನ್ ಹೇಳಿದರು. ಆಗ ನಾನು ಲಾಕ್‌ಡೌನ್ ಮುಗಿದ ಕೂಡಲೇ ಚಿತ್ರೀಕರಣ ಸ್ಟಾರ್ಟ್ ಮಾಡ್ತೀನಿ ಎಂದೆ. ನಂತರ ಒಂದು ಹತ್ತು ದಿನ ಶೂಟಿಂಗ್ ಸಹ ಮಾಡಿದೆ” ಎಂದಿದ್ದಾರೆ ಭರತ್.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್, ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಸಿನಿಮಾದ ನಿರ್ದೇಶಕ ಆಂಥೊನಿ ಸಿನಿಮಾದ ಕ್ಯಾಮೆರಾಮನ್ ಅವರುಗಳು ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದ್ದು, ”ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೆ ಕಾಣಿಸದಂತೆ ಮಾಡಿಬಿಡ್ತೀನಿ ಹುಷಾರಾಗಿರು” ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆ ಧ್ವನಿ ದರ್ಶನ್ ಅವರ ಧ್ವನಿ ಹೋಲುತ್ತಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App