The New Indian Express
ನವದೆಹಲಿ: ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆ ಮುಗಿಯುತ್ತಿದ್ದಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಟಿಎಂಸಿ ನಡುವಣ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ಈ ಚುನಾವಣೆಗಳಲ್ಲಿ ಪ್ರತಿಪಕ್ಷ ಅಭ್ಯರ್ಥಿಗಳ ಸೋಲನ್ನು ನಿರೀಕ್ಷಿಸಲಾಗಿತ್ತು. ಆದರೆ ಇದು ಪ್ರತಿಪಕ್ಷಗಳಲ್ಲಿನ ರಾಜಕೀಯ ದೋಷಗಳನ್ನು ಬಹಿರಂಗಪಡಿಸಿದೆ. ಎರಡು ಪ್ರಮುಖ ವಿರೋಧ ಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಚುನಾವಣೆಯಿಂದ ದೂರವಿದದ್ದು ಒಳ್ಳೆಯದಲ್ಲ ಮತ್ತು ಇದು ಅವರು ಚುನಾವಣಾ ಭವಿಷ್ಯವನ್ನು ಹಾಳುಮಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದನ್ನೂ ಓದಿ: ಇದು ಕೋಪಕ್ಕೆ, ಪ್ರತಿಷ್ಠೆಗೆ ಸಮಯವಲ್ಲ: ದೀದಿಗೆ ಮಾರ್ಗರೇಟ್ ಆಳ್ವಾ ಹಾಗೆ ಹೇಳಿದ್ದೇಕೆ?
ರಾಷ್ಟ್ರಪತಿ ಚುನಾವಣೆಯಲ್ಲಿ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸಿದಕ್ಕಾಗಿ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮತ್ತು ಟಿಎಂಸಿ ಪೈಪೋಟಿ ನಡೆಸುತ್ತಿದ್ದರೂ ಉಪರಾಷ್ಟ್ರಪತಿ ಚುನಾವಣೆ ಸಮಯದಲ್ಲಿ ಅವರ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಹೊರಬಂದವು. ಎನ್ ಡಿಎ ಅಭ್ಯರ್ಥಿ ಜಗದೀಪ್ ಧನ್ ಕರ್ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡೆ ಮಾರ್ಗರೇಟ್ ಆಳ್ವಾ ಕಣದಲ್ಲಿದ್ದರು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಅಭ್ಯರ್ಥಿ ಕಣಕ್ಕಿಳಿಸುವ ಮುನ್ನ ತನ್ನೊಂದಿಗೆ ಸೂಕ್ತ ಸಮಾಲೋಚನೆ ನಡೆಸಿಲ್ಲ ಎಂದು ಹೇಳಿ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿತ್ತು. ಇದು ಪ್ರತಿಷ್ಠೆ ಅಥವಾ ಕೋಪದ ಸಮಯವಲ್ಲಾ ಆದರೆ, ಧೈರ್ಯ, ನಾಯಕತ್ವ ಮತ್ತು ಒಗ್ಗಟ್ಟಿನ ಸಂದರ್ಭವಾಗಿದೆ ಎಂದು ಮಾರ್ಗರೇಟ್ ಆಳ್ವಾ ಹೇಳಿದ್ದರು. ಆದಾಗ್ಯೂ, ಮಮತಾ ಬ್ಯಾನರ್ಜಿ ತಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಅದು ಆಗಲಿಲ್ಲ.
ಮಾರ್ಗರೇಟ್ ಆಳ್ವಾ ಸೋಲಿನೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾರ್ವಜನಿಕವಾಗಿಯೇ ಟಿಎಂಸಿ ಜೊತೆಗಿನ ಅಸಮಾಧಾನವನ್ನು ಹೇಳಿಕೊಂಡರು. ಮಾರ್ಗರೇಟ್ ಆಳ್ವಾ ಉತ್ಸಾಹದಿಂದ ಪ್ರಚಾರ ಮಾಡಿದರೂ ಟಿಎಂಸಿ ಅವರನ್ನು ಬೆಂಬಲಿಸದಿರುವುದು ದುರಾದೃಷ್ಟಕರ ಎಂದು ಟ್ವೀಟರ್ ನಲ್ಲಿ ಆಕ್ರೋಶ ಹೊರಹಾಕಿದರು. ಮಾರ್ಗರೇಟ್ ಆಳ್ವಾ ಕೂಡಾ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲವು ಪ್ರತಿಪಕ್ಷಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿರುವುದು ದುರಾದೃಷ್ಟಕರ. ವಿರೋಧ ಪಕ್ಷಗಳ ಕೂಟ ಕಲ್ಪನೆಯನ್ನು ಹಳಿ ತಪ್ಪಿಸುವ ಪ್ರಯತ್ನ ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರತಿಪಕ್ಷಗಳ ದೋಷವನ್ನು ತೋರುತ್ತದೆ. ಹೀಗೆ ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಎನ್ ಡಿಎ ಎದುರಿಸುವುದು ಪ್ರತಿಪಕ್ಷಗಳಿಗೆ ಕಷ್ಟವಾಗಲಿದೆ ಎಂದು ರಾಜಕೀಯ ವಿಶ್ಲೇಷಕ ರಶೀದ್ ಕಿದ್ವಾಯಿ ಹೇಳುತ್ತಾರೆ.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ, ಪ್ರತಿಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಎರಡೂ ಕಡೆಯ ಟೀಕೆಗಳು, ಸಾರ್ವಜನಿಕ ಕಾಮೆಂಟ್‌ಗಳು ಸಹಾಯ ಮಾಡಲಿಲ್ಲ ಮತ್ತು ವಾಸ್ತವವಾಗಿ ವ್ಯತ್ಯಾಸಗಳನ್ನು ವಿಸ್ತರಿಸಿತು. ಆದರೆ ಇದು 2024 ರ ಚುನಾವಣೆಗೆ ಸಂದೇಶವನ್ನು ಕಳುಹಿಸುತ್ತದೆ ಎಂದು ಜೆಎನ್ ಯು ಪ್ರೊಪೆಸರ್ ಸಂಜಯ್ ಕೆ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App