Online Desk
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಕೊನೆಗೂ ಬಿಬಿಎಂಪಿ ತೆರೆ ಎಳೆಯುವ ಕಾರ್ಯ ಮಾಡಿದ್ದು, ವಿವಾದಿತ ಭೂಮಿ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಶನಿವಾರ ಘೋಷಣೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿಯ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಅವರು, ‘ಬೆಂಗಳೂರು ನಗರದ ಚಾಮರಾಜಪೇಟೆಯ ಸರ್ವೇ ನಂಬರ್ 40ರಲ್ಲಿ 2 ಎಕರೆ 5 ಗುಂಟೆ ಈದ್ಗಾ ಮೈದಾನವು ‘ಕಂದಾಯ ಇಲಾಖೆಗೆ’ ಸೇರಿದೆ ಎಂದು ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಮು ಉದ್ವಿಗ್ನತೆ: ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು
ಇತ್ತೀಚಿಗೆ ಈದ್ಗಾ ಮೈದಾನದ ಮಾಲಿಕತ್ವದ ಕುರಿತು ವಿವಾದವನ್ನು ಸೃಷ್ಟಿಸಲಾಗಿತ್ತು. ಬಿಬಿಎಂಪಿ ತನ್ನ ದಾಖಲೆಗಳಲ್ಲಿ ಆಟದ ಮೈದಾನ ಎಂದು ದಾಖಲಾಗಿದೆ ಎಂದು ತಿಳಿಸಿತ್ತು. ವಕ್ಫ್ ಬೋರ್ಡ್ ಈದ್ಗಾ ಮೈದಾನ ವಕ್ಫ್ ಬೋರ್ಡ್‍ಗೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ವಕ್ಫ್ ಬೋರ್ಡ್ ಹೆಸರಿಗೆ ಖಾತೆಯನ್ನು ಮಾಡಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಎರಡು ಬಾರಿ ವಕ್ಫ್ ಬೋರ್ಡ್‍ಗೆ ನೋಟೀಸ್ ನೀಡಿತ್ತು. ಆದರೆ ವಕ್ಫ್ ಬೋರ್ಡ್ ನ್ಯಾಯಾಲಯದ ಆದೇಶವನ್ನು ಹೊರತು ಪಡಿಸಿ, ಈದ್ಗಾ ಮೈದಾನ ವಕ್ಫ್ ಆಸ್ತಿ ಎಂಬುದನ್ನು ಪುಷ್ಟಿಕರಿಸುವಂತಹ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹಾಗಾಗಿ ವಿಚಾರಣೆಯ ಬಳಿಕ ಆಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲಾಗಿದೆ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ಕಾನೂನು ಸಮರ ಮುಂದುವರೆಸುತ್ತೇವೆ: ವಕ್ಫ್ ಬೋರ್ಡ್
ಇನ್ನು ಬಿಬಿಎಂಪಿ ಆದೇಶಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ಈಗ ಬಿಬಿಎಂಪಿ ಅದು ಕಂದಾಯ ಇಲಾಖೆಯ ಆಸ್ತಿ ಎಂದು ತಿಳಿಸಿರುವುದರಿಂದ, ಕಂದಾಯ ಇಲಾಖೆ ಜೊತೆ ಯಾವ ರೀತಿ ವ್ಯವಹರಿಸಬೇಕು ಎಂಬುದರ ಕುರಿತು ಮುಂದಿನ ಹೆಜ್ಜೆಗಳನ್ನು ಇಡುತ್ತೇವೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ.
ಇದನ್ನೂ ಓದಿ: ‘7 ದಿನಗಳೊಳಗೆ ಈದ್ಗಾ ಮೈದಾನದ ಮತ್ತಷ್ಟು ದಾಖಲೆ ನೀಡಿ’: ವಕ್ಫ್ ಬೋರ್ಡ್ ಗೆ ಬಿಬಿಎಂಪಿ ಮತ್ತೊಂದು ನೋಟಿಸ್!
ಸಂಘ ಪರಿಪರಿವಾರ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಚಾಮರಾಜಪೇಟೆ ಬಂದ್‍ಗೆ ಗಣೇಶೋತ್ಸವ, ಸ್ವಾತಂತ್ರ್ಯ ದಿನಾಚಾರಣೆ, ಗಣರಾಜ್ಯೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚಾರಣೆಗೆ ಅನುಮತಿ ಕೊಡಬೇಕು ಎಂದು ಪಟ್ಟು ಹಿಡಿದಿದ್ದವು. ಅಲ್ಲದೆ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಿಕೊಳ್ಳಲು ಬಿಬಿಎಂಪಿ ಸೇರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರಿಂದ ನಗರದಲ್ಲಿ ಈದ್ಗಾ ಮೈದಾನವು ವಿವಾದದ ಕೆಂದ್ರ ಬಿಂದುವಾಗಿತ್ತು.
For more news update stay with actp news
Android App
Facebook
Twitter
Dailyhunt
Share Chat
Telegram
Koo App