English Tamil Hindi Telugu Kannada Malayalam Google news Android App
Tue. Mar 28th, 2023

Online Desk

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. 

ಇಂದಿನ ಉಡಾವಣೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿ  ಶಿಫಾರಸುಗಳನ್ನು ನೀಡಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ, ಶಿಫಾರಸುಗಳನ್ನು ಆಧರಿಸಿ ಇಸ್ರೋ ಎಸ್ಎಸ್ಎಲ್ ವಿ-ಡಿ2 ಉಪಗ್ರಹದೊಂದಿಗೆ ಶೀಘ್ರವೇ ಬರಲಿದೆ ಎಂದು ಹೇಳಿದೆ.

ಎಸ್ಎಸ್ಎಲ್ ವಿ-ಡಿ1 ಉಪಗ್ರಹಗಳನ್ನು 356ಕಿ.ಮೀx 76 ಕಿ.ಮೀ ನ ದೀರ್ಘ ವೃತ್ತಾಕಾರದ  ಕಕ್ಷೆಯಲ್ಲಿರಿಸಿದೆ. ಆದರೆ ಅದು 356 ಕಿ.ಮೀ ವೃತ್ತಾಕಾರಾದ ಕಕ್ಷೆಗೆ ಸೇರಬೇಕಿತ್ತು. ಈ ಉಪಗ್ರಹಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ.  ಸಂವೇದಕ ವೈಫಲ್ಯವನ್ನು ಗುರುತಿಸಲು ಲಾಜಿಕ್ ನ ವಿಫಲತೆಯಿಂದ ಈ ಅವಘಡ ಉಂಟಾಗಿದೆ ಎಂದು ಇಸ್ರೋ ಟ್ವಿಟರ್ ಮೂಲಕ ಪ್ರಕಟಿಸಿದೆ. 

ಇದನ್ನೂ ಓದಿ: SSLV-D1/EOS-02 ಮಿಷನ್ : ಎಲ್ಲಾ ಹಂತಗಳು ಸಹಜವಾಗಿದ್ದು, ಕಕ್ಷೆಗೆ ಸೇರಿಸಲಾಗಿದೆ, ಆದರೆ ಅಸ್ಥಿರವಾಗಿದೆ: ಇಸ್ರೊ

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ವಿವರವಾದ ಹೇಳಿಕೆಯನ್ನು ಶೀಘ್ರವೇ ಅಪ್ಲೋಡ್ ಮಾಡುವುದಾಗಿ ಇಸ್ರೋ ತಿಳಿಸಿದೆ. 
ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಉಡಾವಣೆ ಮಾಡಿತ್ತು. 
 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *