ANI
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಕುಸ್ತಿಪಟು ರವಿಕುಮಾರ್ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎದುರಾಳಿ ಎಬಿಕೆವೆನಿಮೊ ವೆಲ್ಸನ್ ಅವರನ್ನು 10-0 ಅಂತರದಲ್ಲಿ ಸೋಲಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟರು. ಶ್ರೇಷ್ಠ ಹೋರಾಟದ ಮೂಲಕ ಚಿನ್ನ ಗೆದ್ದ ರವಿಕುಮಾರ್ ದಹಿಯಾ, ಕುಸ್ತಿಯಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನವನ್ನು ತಂದುಕೊಟ್ಟರು.
ಇದಕ್ಕೂ ಮುನ್ನ ಪಾಕಿಸ್ತಾನದ ಗ್ರಾಪ್ಲರ್ ಅಲಿ ಅಸದ್ ಅವರನ್ನು ಸೋಲಿಸಿ ಫೈನಲ್ ಗೆ ರವಿಕುಮಾರ್ ದಹಿಯಾ ಲಗ್ಗೆ ಇಟ್ಟಿದ್ದರು.
ಆ ಸ್ಪರ್ಧೆಯಲ್ಲಿ 14-4 ಅಂತರದಲ್ಲಿ ದಹಿಯಾ ಗೆಲುವು ಸಾಧಿಸಿದ್ದರು.
Olympic silver medallist Ravi Kumar Dahiya bags a gold medal in 57 Kg weight category in wrestling with a 10-0 victory in #CommonwealthGames2022 pic.twitter.com/RXSLzWGN4R
— ANI (@ANI) August 6, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App