English Tamil Hindi Telugu Kannada Malayalam Google news Android App
Tue. Mar 28th, 2023

The New Indian Express

ಕನ್ನಡ ಚಿತ್ರರಂಗದ “ಕನಸಿನ ರಾಣಿ’ಯಾಗಿ ಸಿನಿಪ್ರಿಯರ ಮನಗೆದ್ದಿದ್ದ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಈಗ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿದ್ದಾರೆ.

ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ಅನನ್ಯಾ ಈಗ ರಾಧನಾ ರಾಮ್‌ ಎಂಬ ಹೆಸರಿನಲ್ಲಿ ಹೀರೋಯಿನ್‌ ಆಗಿ ಎಂಟ್ರಿಯಾಗಲು ರೆಡಿಯಾಗಿದ್ದು, ತಮ್ಮ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆಗೆ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ರಾಧನಾ ರಾಮ್‌

ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 56ನೇ ಸಿನಿಮಾ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ಸದ್ಯಕ್ಕೆ ಹೆಸರಿಡದ ಈ ಸಿನಿಮಾದಲ್ಲಿ ರಾಧನಾ ರಾಮ್‌ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದ ದಿನದಂದೇ ರಾಧನಾ ರಾಮ್‌ ಅವರ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಅಧಿಕೃತವಾಗಿ ನಾಯಕಿಯ ಹೆಸರನ್ನು ಘೋಷಿಸಿದೆ. ಇನ್ನು ಮೊದಲಿನಿಂದಲೂ ಅಭಿನಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವ ರಾಧನಾ ರಾಮ್‌, ಕಳೆದ ನಾಲ್ಕೈದು ವರ್ಷಗಳಿಂದ ಹೀರೋಯಿನ್‌ ಆಗಲು ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಮುಂಬೈನಲ್ಲಿ ಅಭಿನಯ ತರಬೇತಿಯನ್ನೂ ಪಡೆದುಕೊಂಡ ರಾಧನಾ ರಾಮ್‌, ಈಗ ಹೀರೋಯಿನ್‌ ಆಗಿ ಪೂರ್ಣ ಪ್ರಮಾಣದಲ್ಲಿ ತೆರೆಮೇಲೆ ಬರುತ್ತಿದ್ದಾರೆ.

ಮಾಲಾಶ್ರೀ ಪುತ್ರಿಯ ಮೂಲ ಹೆಸರು ಅನನ್ಯಾ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಅನಿ ಎಂದೇ ಕರೆಯುತ್ತಾರೆ. ಆದರೆ ಈಗ ಬಣ್ಣದ ಲೋಕ್ಕೆ ಎಂಟ್ರಿ ನೀಡಿರುವ ಅವರು, ರಾಧನಾ ರಾಮ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ದೊಡ್ಡ ಬ್ಯಾನರ್‌ವೊಂದರ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದಕ್ಕೆ ತುಂಬ ಎಕ್ಸೈಟ್ ಆಗಿದ್ದಾರೆ. ‘ನಾನಿನ್ನೂ ಶಾಕ್‌ನಲ್ಲೇ ಇದ್ದೇನೆ..’ ಎನ್ನುತ್ತಾರೆ ಅವರು.

‘ನಾನು ಬಿಬಿಎ ಮುಗಿಸಿದ್ದೇನೆ. ನಾನು ನಟನೆ ಮತ್ತು ಡ್ಯಾನ್ಸ್ ಮಾಡಿದ್ದೇನೆ. ನನ್ನ ತಂದೆ ತಾಯಿ ಚಿತ್ರರಂಗದವರು ಎನ್ನುವುದೇ ನನ್ನ ಪಾಲಿನ ಅದೃಷ್ಟ. ಅಪ್ಪ ನನಗೆ ತುಂಬ ಮಾರ್ಗದರ್ಶನ ನೀಡಿದ್ದರು. ಚಿತ್ರರಂಗವನ್ನು ಗಂಭೀರವಾಗಿ ನೋಡಬೇಕು. ಇಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು. ಕಷ್ಟ ಇದ್ದರೆ ಸಕ್ಸಸ್ ಸಿಗತ್ತೆ ಎಂದು ಅಪ್ಪ ಹೇಳುತ್ತಲೇ ಇದ್ದರು. ತರುಣ್ ಸುಧೀರ್‌ ಸರ್‌ ಮತ್ತು ದರ್ಶನ್ ಸರ್ ಕಾಂಬಿನೇಷನ್‌ನಲ್ಲಿ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಅವರ ಹಿಂದಿನ ‘ರಾಬರ್ಟ್’ ಸಿನಿಮಾವನ್ನು ನೋಡಿದ್ದೇನೆ. ನಾನು ತುಂಬ ತಯಾರಿಯೊಂದಿಗೆ ಚಿತ್ರೀಕರಣಕ್ಕೆ ಬರಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ ರಾಧನಾ ರಾಮ್.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 56ನೇ ಸಿನಿಮಾ ಮುಹೂರ್ತದ ದೃಶ್ಯ.

ಮೊದಲ ಬಾರಿಗೆ ಚಿತ್ರರಂಗಕ್ಕೆ ಪ್ರವೇಶ ಮಾಡುವವರಿಗೆ ಇದು ನಿಜಕ್ಕೂ ಅದೃಷ್ಟದಂತೆ. ನನಗಂತೂ ತುಂಬ ಖುಷಿ ಆಗುತ್ತಿದೆ. ತರುಣ್ ಕೆಲಸವನ್ನು ನಾನು ನೋಡಿದ್ದೇನೆ. ಅವರು ಒಳ್ಳೊಳ್ಳೆಯ ಸಿನಿಮಾ ಮಾಡಿದ್ದಾರೆ. ತರುಣ್ ತುಂಬ ಫ್ರೆಂಡ್ಲಿ ವ್ಯಕ್ತಿ. ಈ ಹಿಂದೆ ರಾಕ್‌ಲೈನ್‌ ವೆಂಕಟೇಶ್‌ ಅವರು ಹೇಳಿದ್ರು,  ಈ ಸಿನಿಮಾಗೆ ಸೆಲೆಕ್ಟ್ ಆಗಿರುವ ವಿಚಾರ ನನಗೆ ಸರ್ಪ್ರೈಸ್ ಆಗಿದೆ ಎಂದಿದ್ದಾರೆ ರಾಧನಾ ರಾಮ್.

ಇದನ್ನೂ ಓದಿ: ದರ್ಶನ್-ತರುಣ್ ಸುಧೀರ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ‘ಕನಸಿನ ರಾಣಿ’ ಮಾಲಾಶ್ರೀ ಮಗಳು ನಾಯಕಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಹೊಸ ಅನುಭವ. ಇದುವರೆಗೆ ನನ್ನ ತಾಯಿ ಕ್ಯಾಮೆರಾ ಮುಂದೆ ಅಭಿನಯಿಸುತ್ತಿರುವುದನ್ನು ನೋಡಿದ್ದೆ, ಈಗ ನನ್ನ ಸರದಿ, ದರ್ಶನ್ ಸರ್ ಅವರ ಕಲಾಸಿಪಾಳ್ಯ ನಮ್ಮ ಹೋಮ್ ಬ್ಯಾನರ್ (ರಾಮು ಫಿಲಂಸ್) ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ನಾನು ಅವರ ಸಿನಿಮಾಗಳ ಅಭಿಮಾನಿ ಎಂದು ರಾಧನಾ ರಾಮ್ ತಿಳಿಸಿದ್ದಾರೆ.

‘ನನ್ನ ಮಗಳ ಭರವಸೆ ಇಟ್ಟಮೇಲೆಯೇ ನಾನು ಅವಳನ್ನು ಚಿತ್ರರಂಗಕ್ಕೆ ಪರಿಚಯಬೇಕೆಂದು ನಿರ್ಧರಿಸಿದೆ. ಅವಳು ಅವಳಾಗಿರಬೇಕು. ನನ್ನ ಥರ ಅನ್ನಬಾರದು. ನನ್ನನ್ನು ಬೆಳೆಸಿದವರು ಕನ್ನಡಿಗರು. ನನ್ನನ್ನು ಎಲ್ಲ ಪಾತ್ರಗಳಲ್ಲೂ ಒಪ್ಪಿದ್ದಾರೆ. ಈಗ ನನ್ನ ಮಗಳ ಮೇಲೂ ಕನ್ನಡ ಪ್ರೇಕ್ಷಕರು ಆಶೀರ್ವಾದ ಮಾಡಬೇಕು. ಒಂದು ಯುನಿಕ್‌ ಹೆಸರು ಇರಲಿ ಎಂದು ರಾಧನಾ ರಾಮ್ ಹೆಸರು ಎಂದು ಬದಲಾಯಿಸಿದ್ದೇವೆ ಅಷ್ಟೇ, ಬೇರೇನೂ ಇರಲಿಲ್ಲ’ ಎಂದು ಮಾಲಾಶ್ರೀ ತಿಳಿಸಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *