Online Desk
ಲಡಾಖ್: ಭಾರತ ಹಾಗೂ ಚೀನಾ ನಡುವೆ ಆ.05 ರಂದು ವಿಶೇಷ ಸೇನಾ ಮಾತುಕತೆ ಚುಶುಲ್-ಮೋಲ್ಡೋ ಗಡಿ ಭಾಗದಲ್ಲಿ ನಡೆದಿದೆ. ಈಶಾನ್ಯ ಲಡಾಖ್ ನಲ್ಲಿರುವ ಈ ಪ್ರದೇಶದಲ್ಲಿ ಕಳೆದ 45 ದಿನಗಳಿಂದ ಚೀನಾ ಭಾರತೀಯ ವಾಯುಗಡಿಯ ಉಲ್ಲಂಘನೆ ಮಾಡುತ್ತಿದ್ದು ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದೆ.
ವಾಯುಗಡಿಯನ್ನು ಉಲ್ಲಂಘಿಸುವ ಮೂಲಕ ಚೀನಾ ಪ್ರಚೋದನೆಗೆ ಯತ್ನಿಸುತ್ತಿರುವುದರ ಬಗ್ಗೆ ಭಾರತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಳಿಕ ಉಭಯ ದೇಶಗಳ ನಡುವೆ ಸೇನಾ ಮಾತುಕತೆ ನಡೆದಿದೆ.
ಸಭೆಯಲ್ಲಿ ಒಂದು ತಿಂಗಳಿನಿಂದ ಚೀನಾದ ಚಟುವಟಿಕೆಗಳ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣವೇ ಪ್ರಚೋದನಕಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದೆ.
ಇದನ್ನೂ ಓದಿ: ‘ನಾವೂ ಸಿದ್ಧರಾಗಿದ್ದೇವೆ’: ತೈವಾನ್ ಜಲಸಂಧಿಯಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆ ನಿಯೋಜಿಸಿದ ಚೀನಾಗೆ ಅಮೆರಿಕ ಎಚ್ಚರಿಕೆ
ಚೀನಾದ ಸೌಹಾರ್ದಯುತ ಸಂಬಂಧ ಅಮೆರಿಕ ಸೇರಿದಂತೆ ಹಲವು ದೇಶಗಳೊಂದಿಗೆ ಈಗಾಗಲೇ ಹದಗೆಟ್ಟಿದೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸಭಾಧ್ಯಕ್ಷರು ತೈವಾನ್ ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಪ್ರಯೋಗಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ತೈವಾನ್ ಸಮೀಪದಲ್ಲಿರುವ ಜಪಾನ್ ಗೆ ಸೇರಿದ ವಿಶೇಷ ಆರ್ಥಿಕ ವಲಯ (ಇಇಝೆಡ್) ಮೇಲೆ ಬಿದ್ದಿತ್ತು.
ಇಂದು ನಡೆದ ಸಭೆಯಲ್ಲಿ ಉಭಯ ದೇಶಗಳ ವಾಯುಪಡೆ ಅಧಿಕಾರಿಗಳು ಹಾಗೂ ಸೇನಾ ಪ್ರತಿನಿಧಿಗಳು ಭಾಗವಹಿಸಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App