The New Indian Express
ದರ್ಶನ್ ತೂಗುದೀಪ ಅವರ ಕ್ರಾಂತಿ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿರುವ ಮಧ್ಯೆ ಅವರ ಹೊಸ ಚಿತ್ರದ ಮುಹೂರ್ತ ಇಂದು ವರಮಹಾಲಕ್ಷ್ಮಿ ಹಬ್ಬದ ದಿನ ನಗರದ ದೇವಸ್ಥಾನವೊಂದರಲ್ಲಿ ನೆರವೇರಿತು.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿಯವರು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು. ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನ ಮತ್ತೊಂದು ಚಿತ್ರವಿದು.
It’s official #KanasinaRani @RamuMalashree daughter #RadhanaRam gets her big #debut break with @dasadarshan in director @TharunSudhir #D56 produced by @RocklineEnt
The team introduces the lead heroine today at the film’s muhurath on #VaraMahalakshmifestival @Dcompany171 #DBoss pic.twitter.com/SavKwSdNyA— A Sharadhaa (@sharadasrinidhi) August 5, 2022
ಮಾಲಾಶ್ರೀ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ: ಇದಿಷ್ಟೇ ವಿಷಯವಲ್ಲ. ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ 90ರ ದಶಕದಲ್ಲಿ ಆಳಿದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ಧನ್ಯ ರಾಮ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ತಾರಾ ದಂಪತಿ ಕೋಟಿ ನಿರ್ಮಾಪಕ ರಾಮು ಮತ್ತು ಮಾಲಾಶ್ರೀಯವರ ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷ.
ಈ ಚಿತ್ರದ ಮೂಲಕ ಅನನ್ಯ ಅವರ ಹೆಸರು ರಾಧನಾ ರಾಮ್ ಎಂದು ಜನರಿಗೆ ಪರಿಚಯವಾಗಲಿದೆ. ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮೋಡಿ ಮಾಡಿದ್ದ ಮಾಲಾಶ್ರೀಯವರ ಮಗಳು ಕೂಡ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲಿದ್ದಾರೆಯೇ ಎಂದು ನೋಡಬೇಕಿದೆ.
ಚಿತ್ರದ ಮುಹೂರ್ತದಲ್ಲಿ ಮಾತನಾಡಿದ ನಾಯಕ ದರ್ಶನ್ ರಾಬರ್ಟ್ ಚಿತ್ರತಂಡ ಮತ್ತೆ ಒಂದಾಗುತ್ತಿದ್ದು, ಚಿತ್ರದ ಶೀರ್ಷಿಕೆ ಸದ್ಯದಲ್ಲಿಯೇ ಬಹಿರಂಗಪಡಿಸುತ್ತೇವೆ.ಹೊಸ ಬಗೆಯ ಕಥೆ ಹೊಂದಿರುತ್ತದೆ ಎಂದಷ್ಟೇ ಹೇಳಿದರು.
ನಾಯಕಿ ರಾಧನ್ ರಾಮ್ ಅವರ ತಾಯಿ ಹಿರಿಯ ನಟಿ ಮಾಲಾಶ್ರೀ, ನನಗೆ ಕನ್ನಡಿಗರು ನೀಡಿದ ಪ್ರೀತಿ ಅಪಾರ, ನನಗೆ ನೀಡಿದ ಪ್ರೀತಿಯನ್ನು ಮಗಳಿಗೂ ಕೊಡಿ ಎಂದು ಕೇಳಿಕೊಂಡರು.
ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ… ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ pic.twitter.com/7lf3V33AyN
— Malashree Ramu (@RamuMalashree) August 5, 2022
ಇನ್ನು ದರ್ಶನ್ ಅಭಿಮಾನಿಗಳಿಗಾಗಿ ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರತಂಡ ಕ್ರಾಂತಿ ಚಿತ್ರದ ಹೊಸ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ.
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರಕ್ಕೆ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ.
Learn to fight alone @mediahousefilms @harimonium @shylajanag @bsuresha @Dbeatsmusik#Kranti #ಕ್ರಾಂತಿ#KrantiBegins #D55 pic.twitter.com/6aQtq6LhX3— Darshan Thoogudeepa (@dasadarshan) August 5, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App