English Tamil Hindi Telugu Kannada Malayalam Google news Android App
Thu. Mar 23rd, 2023

Online Desk

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ ಷಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, “ಅಜಾದಿ ಕಾ ಅಮೃತ್ ಮಹೋತ್ಸವ ಮಾಡುವ ಉದ್ದೇಶ ನಮ್ಮ ಚಿಕ್ಕ ಮಕ್ಕಳಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಯಬೇಕು. 75 ವರ್ಷದಲ್ಲಿ ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಕ್ರಾಂತಿಕಾರಿ ಅಭಿವೃದ್ಧಿಯ ಬಗ್ಗೆ ವಿಶ್ವಕ್ಕೆ ತಿಳಿಸುವ ಕೆಲಸ ಮಾಡಬೇಕು. ಮೂರನೇಯದು 75ನೇ ವರ್ಷದಲ್ಲಿ ಸಂಕಲ್ಪ ಮಾಡಬೇಕು ಸ್ವಾತಂತ್ರ್ಯೋತ್ಸವದ ಶತಾಬ್ದಿಯನ್ನು ಭಾರತ ಮುಂಚೂಣಿ ರಾಷ್ಟ್ರವಾಗಿ ನಿಲ್ಲಬೇಕು.

ಈ ದೇಶವನ್ನು ಅಭಿವೃದ್ಧಿ ಪಡಿಸಲು ಅನೇಕ ಪ್ರಧಾನಿಗಳು ಒಂದಿಲ್ಲೊಂದು ರೀತಿ ಶ್ರಮ ವಹಿಸಿದ್ದಾರೆ. ಪ್ರಧಾನಿ ಮೋದಿ ಬಂದ ನಂತರ ದೇಶದ ಸರ್ವ ಸ್ಪರ್ಶಿ ಅಭಿವೃದ್ಧಿ ಮಾಡಿದ್ದಾರೆ . ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುವಂತಿಲ್ಲ. ಸರ್ವ ಸಮುದಾಯಗಳ ಅಭಿವೃದ್ದಿ ಮಾಡಿದ್ದಾರೆ.

2014ಕ್ಕೆ ಮುಂಚೆ ಪ್ರತಿ ದಿನ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಸುದ್ದಿ ಮುಖ ಪುಟದಲ್ಲಿ ರಾರಾಜಿಸುತ್ತಿತ್ತು. ಹಿಂದಿನ ಅವಧಿಯಲ್ಲಿ ಪ್ರಧಾನ ಮಂತ್ರಿಯನ್ನು ದೇಶದಲ್ಲಿ ಯಾರು ಪ್ರಧಾನಿ ಎಂದು ಪರಿಗಣಿಸಿರಲಿಲ್ಲ. ಎಲ್ಲ ಮಂತ್ರಿಗಳು ತಮ್ಮನ್ನು ತಾವೇ ಪ್ರಧಾನ ಮಂತ್ರಿ ಎಂದುಕೊಂಡಿದ್ದರು. ಈಗ ಪ್ರಧಾನಿಯ ಬಗ್ಗೆ ವಿಶ್ವವೇ ಮಾತನಾಡುತ್ತಿದೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ.

2019 ರಲ್ಲಿ ಕೊರೊನಾ ಪರಿಣಾಮ ಲಾಕ್ ಡೌನ್ ಮಾಡಲಾಯಿತು. ವಿಶ್ವದಲ್ಲಿ ಎಲ್ಲ ರಾಷ್ಟ್ರಗಳು ಸಮಸ್ಯೆಗೆ ಸಿಲುಕಿದವು. ಪ್ರಧಾನಿ ಆರಂಭದಲ್ಲಿಯೇ ದೇಶದ ವಿಜ್ಞಾನಿಗಳನ್ನು ಕರೆದು ನಮ್ಮದೇ ಆದ ವ್ಯಾಕ್ಸಿನೇಶನ ಉತ್ಪಾದನೆಗೆ ಸೂಚಿಸಿದರು. ಕೊವಿಡ್ ನಂತರ ಆರ್ಥಿಕ ವ್ಯವಸ್ಥೆ ಸುಧಾರಣೆಯಾದ ವಿಶ್ವದ ಏಕೈಕ ದೇಶ ಭಾರತ. ಉದ್ಯಮಗಳಿಗೆ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಬಡವರಿಗೆ ಉಚಿತ ಆಹಾರ ಒದಗಿಸಲಾಯಿತು. ನಾವು ಯಾವದೇ ದೇಶವನ್ನು ನಿಂದಿಸುವುದಿಲ್ಲ. ಅದು ಭಾರತದ ಗುಣವಲ್ಲ. ವಿಶ್ವದ ಯಾವುದೇ ರಾಷ್ಟ್ರ ಮಾಡದ ಕೆಲಸವನ್ನು ಭಾರತ ಮಾಡಿದೆ. ಅದರ ಪರಿಣಾಮವಾಗಿ ಜನರು ಮುಕ್ತವಾಗಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಾಯಿತು.

ನಾವು ಎನ್ ಇಪಿ, ಆರೋಗ್ಯ ನೀತಿ, ಎಲೆಕ್ಟ್ರಾನಿಕ್ಸ್ ನೀತಿ, ಡಿಜಿಟಲ್ ಇಂಡಿಯಾ, ಉಡಾನ್, ಗ್ರೀನ್ ಇಂಡಿಯಾ, ಸ್ವಚ್ಛ ಭಾರತ ಭಾರತ ಅಭಿಯಾನ ಮಾಡಿದೆವು. ಅದರ ಪರಿಣಾಮ ಸ್ವಸ್ತ ಭಾರತ ನಿರ್ಮಾಣ ಮಾಡಲು ಸಾಧ್ಯವಾಯಿತು. ಭಾರತವನ್ನು ಉತ್ಪಾದನಾ ಹಬ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೊರೊನಾ ನಂತರ ಭಾರತದ ಜಿಡಿಪಿ 7.4 ಆಗಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಜಿಡಿಪಿ ಬಿದ್ದು ಹೋಗಿದೆ. ಈಸ್ ಆಪ್ ಡೂಯಿಂಗ್ ನಲ್ಲಿ 143. ನೇ ಸ್ಥಾನದಿಂದ 63 ಕ್ಕೆ ಬಂದಿದ್ದೇವೆ. ರೂಪಾಯಿ ಮೌಲ್ಯದ ಬಗ್ಗೆ ಸಾಕಷ್ಟು ಚೃಚೆಯಾಗಿತ್ತಿದೆ ಆದರೆ, ಚೀನಾ, ಯುರೋಪ್, ಜಪಾನ್ ರೂಪಾಯಿಗಳ ಬಗ್ಗೆಯೂ ನಾವು ಹೋಲಿಕೆ ಮಾಡಿಕೊಳ್ಳಬೇಕು. ಪಿಎಂ ಗತಿ ಶಕ್ತಿಯಿಂದ ಉದ್ಯಮಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯ!

ಅಬಾದಿ ಯಾವಾಗ ಆಗುತ್ತದೆ. ಎಲ್ಲರಿಗೂ ಖರಿದಿಸುವ ಶಕ್ತಿ ಬಂದಾಗ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಯುತ್ತಿದೆ. ಪ್ರತಿ ಮನೆಗು ಶೌಚಾಲಯ ನೀಡಿದೆವು, ನೇರ ಬೆಮೆಪಿಟ್ ಯೋಜನೆ ಜಾರಿಗೆ ತಂಧೆವು, ರೈತರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಮಾಡಿದೆವು. ಜನರು ನಿತ್ಯ ಜೀವನದ ಸಮಸ್ಯೆಯಿಂದ ಹೊರ ಬರುವಂತೆ ಮಾಡಿದೆವು. 60 ಕೋಟಿ ಜನರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ.

ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ಹೇಳಬೇಕು. ಪ್ರತಿ ಮನೆಗೆ ನೀರು ಬಂದರೆ, ವಿದ್ಯುತ್ ಬಂದರೆ ಜಿಡಿಪಿ ಅಭಿವೃದ್ಧಿ ಯಾಗುವುದಿಲ್ಲವೇ, ಅದನ್ನು ಪುಸ್ತಕದಲ್ಲಿ ಬರೆದಿಲ್ಲ ಎಂದು ಚಿಂತಿಸಬೇಡಿ, ನಾವು ಜಿಡಿಪಿಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇವೆ. ಉದ್ಯಮಗಳು ಸ್ಕೇಲ್ ಬದಲಾಯಿಸಬೇಕಿದೆ.ಆರ್ ಆಂಡ್ ಡಿ ಕಡೆಗೆ ಹೆಚ್ಚಿನ ಗಮನ ಹರಿಸಬೆಕಿದೆ. ದೇಶದ ವ್ಯಾಪ್ತಿಯಲ್ಲಿ ಆರ್ ಎಂಡ್ ಮಾಡಬೇಕು. ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳ ನಡುವೆ ಜೋಡಣೆ ಮಾಡಿ ಅಭಿವೃದ್ದಿಯಾಗಬೇಕು. ಉದ್ಯಮಗಳು ಕಚ್ಚಾ ವಸ್ತುವಿನಿಂದ ಹಿಡಿದು ಉತ್ಪಾದನೆಯಾದ ವಸ್ತುವನ್ನು ರಫ್ತು ಮಾಡುವವರೆಗೂ ಎಲ್ಲವೂ ಆತ್ಮನಿರ್ಭರವಾಗಬೇಕು. ಉದ್ಯಮ ಪ್ರತ್ಯೇಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಜನರ ಜೊತೆಗೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದು ಅಮಿತ್ ಷಾ ಹೇಳಿದರು.

ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ ರೆಡ್ಡಿ‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಚಿವ ಮುರುಗೇಶ ನಿರಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *