AFP
ಪಿಂಗ್ಟನ್: ತೈವಾನ್ ಸುತ್ತುವರೆದಂತೆ ಚೀನಾದ ಅತಿದೊಡ್ಡ ಮಿಲಿಟರಿ ಕಸರತ್ತು ಗುರುವಾರ ಆರಂಭವಾಗಿದ್ದು, ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿದ ನಂತರ ಪ್ರಮುಖ ಅಂತರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ತನ್ನ ಪ್ರಬಲ ಪ್ರದರ್ಶನ ತೋರಿಸಲು ಚೀನಾ ಸಜ್ಜಾಗಿದೆ.
ನಿನ್ನೆ ನ್ಯಾನ್ಸಿ ಪೆಲೋಸಿಯವರು ತೈವಾನ್ ಪ್ರವಾಸ ಕೈಗೊಂಡಾಗಲೇ ಚೀನಾ ಕಡೆಯಿಂದ ಬೆದರಿಕೆಗಳು ವ್ಯಕ್ತವಾಗಿದ್ದು, ಸ್ವಯಂ ಅಧಿಕಾರ ನಡೆಸುತ್ತಿರುವ ದ್ವೀಪ ಪ್ರಾಂತ್ಯ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆ.
ಕಳೆದ 25 ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರ ನಂತರದ ಪ್ರಬಲ ಪ್ರಮುಖ ಹುದ್ದೆ ಹೊಂದಿರುವ ಸ್ಪೀಕರ್ ಅವರು ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ತೈವಾನ್‌ನಂತಹ ಪ್ರಜಾಸತ್ತಾತ್ಮಕ ಮಿತ್ರನನ್ನು ಅಮೆರಿಕ ಕೈಬಿಡುವುದಿಲ್ಲ ಎಂದು ನಿಸ್ಸಂದಿಗ್ದವಾಗಿ ಸ್ಪಷ್ಟಪಡಿಸಿದೆ.
ಇದು ಚೀನಾವನ್ನು ಕೆರಳಿಸಿದ್ದು ಅದಕ್ಕೆ ತಕ್ಕ ಶಾಸ್ತಿಯ ಭಾಗವಾಗಿ ಇಂದು ಬೃಹತ್ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ತೈವಾನ್ ಸುತ್ತಮುತ್ತ ಕೈಗೊಂಡಿದೆ. ಇದು ವಿಶ್ವದ ಅತಿ ಜನನಿಬಿಡ ಜಲಮಾರ್ಗವಾಗಿದೆ.
ಇದನ್ನೂ ಓದಿ: ಪೆಲೋಸಿ ನಿರ್ಗಮನದ ನಂತರ ತೈವಾನ್ ವಾಯು ರಕ್ಷಣಾ ವಲಯ ಪ್ರವೇಶಿಸಿದ ಚೀನಾದ 27 ಯುದ್ಧ ವಿಮಾನಗಳು
ಅಂತಾರಾಷ್ಟ್ರೀಯ ಕಾಲಮಾನ ಇಂದು 12 ಗಂಟೆಗೆ ಮಿಲಿಟರಿ ಕಾರ್ಯಾಚರಣೆ ಆರಂಭವಾಗಲಿದ್ದು, ಲೈವ್-ಫೈರಿಂಗ್ ನ್ನು ಒಳಗೊಂಡಿರುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನೈಜ ಯುದ್ಧ ಕಸರತ್ತಿಗಾಗಿ ಚೀನಾ ತೈವಾನ್ ದ್ವೀಪದ ಸುತ್ತಲಿನ ಆರು ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಿದೆ. ಈ ಅವಧಿಯಲ್ಲಿ, ಸಂಬಂಧಿತ ಹಡಗುಗಳು ಮತ್ತು ವಿಮಾನಗಳು ಜಲ ಮತ್ತು ವಾಯುಪ್ರದೇಶಗಳನ್ನು ಪ್ರವೇಶಿಸಬಾರದು ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ನ್ಯಾನ್ಸಿ ಪೆಲೊಸಿ ಭೇಟಿಗೆ ವಿರೋಧ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ
ಈ ಕಾರ್ಯಾಚರಣೆ ತೈವಾನ್‌ನ ಸುತ್ತಮುತ್ತಲಿನ ಬಹು ವಲಯಗಳಲ್ಲಿ ನಡೆಯುತ್ತವೆ. ದ್ವೀಪದ ತೀರದಿಂದ ಕೇವಲ 20 ಕಿಲೋಮೀಟರ್ ಒಳಗೆ ಕೆಲವು ಹಂತಗಳಲ್ಲಿ ನಡೆಯಲಿದ್ದು ಭಾನುವಾರ ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ. ತೈವಾನ್‌ನ ರಕ್ಷಣಾ ಸಚಿವಾಲಯ ಈ ಕುರಿತು ಪ್ರತಿಕ್ರಿಯಿಸಿದ್ದು, ತಾನು ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸಂಘರ್ಷಕ್ಕೆ ಸಿದ್ದವಾಗಿದ್ದೇವೆ. ಆದರೆ ಸಂಘರ್ಷವೇ ಪರಿಹಾರವಲ್ಲ ಎಂದು ಹೇಳಿದೆ.
ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಸಮರಕ್ಕೆ ಎಂದೂ ಮುಂದಾಗುವುದಿಲ್ಲ, ಆದರೆ ಯುದ್ಧಕ್ಕೆ ತಯಾರಿ ಮಾಡುವ ತತ್ವವನ್ನು ಎತ್ತಿಹಿಡಿಯುತ್ತದೆ, ತಾವಾಗಿಯೇ ಸಂಘರ್ಷ ಬಯಸಿ ಹೋಗುವುದಿಲ್ಲ ಎಂದು ಹೇಳಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App