The New Indian Express
ಬೆಂಗಳೂರು: ಹಿಂದೂ ಪಂಚಾಂಗ ಪ್ರಕಾರ ಶ್ರಾವಣ ಮಾಸ ಅತ್ಯಂತ ಪ್ರಶಸ್ತ ತಿಂಗಳು, ಹಬ್ಬಗಳ ಸಾಲು ಸಾಲು, ಹಲವರು ಈ ಮಾಸದಲ್ಲಿ ಮಾಂಸ ಸೇವಿಸುವುದಿಲ್ಲ.
ರಾಜ್ಯ ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುತ್ತದೆ, ಆದರೆ ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವುದು ಸರಿಕಾಣುತ್ತಿಲ್ಲ. ಹಾಗೆಂದು ಶಿಕ್ಷಣ ಇಲಾಖೆ ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಬಾಳೆಹಣ್ಣು, ಕಡಲೆ ಚಿಕ್ಕಿಯನ್ನು ನೀಡುವ ಬದಲು ಮುಂದಿನ ತಿಂಗಳಿನಿಂದ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಶ್ರಾವಣದ ಸಮಯದಲ್ಲಿ, ಅನೇಕರು ಮೊಟ್ಟೆ ಅಥವಾ ಮಾಂಸಾಹಾರಿ ಆಹಾರವನ್ನು ಸೇವಿಸುವುದಿಲ್ಲ, ಶಾಲೆಗಳಲ್ಲಿ ಅನೇಕ ಮಕ್ಕಳು ಮೊಟ್ಟೆಗಳನ್ನು ಸೇವಿಸಲು ನಿರಾಕರಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಈ ಮಕ್ಕಳಿಗೆ ಈ ತಿಂಗಳು ಬಾಳೆಹಣ್ಣು ಮತ್ತು ಚಿಕ್ಕಿಗಳನ್ನು ನೀಡುತ್ತೀರಾ ಎಂದು ಕೇಳಿದರೆ ಡಿಪಿಐ ಆಯುಕ್ತ ಡಾ.ವಿಶಾಲ್ ಆರ್, ಅಂತಹ ಮಕ್ಕಳಿಗೆ ಈ ತಿಂಗಳ ಬದಲಿಗೆ ಮುಂದಿನ ತಿಂಗಳಿನಿಂದ ಮೊಟ್ಟೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಮಕ್ಕಳ ದೇಹದಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮೊಟ್ಟೆ ಅಥವಾ ಬಾಳೆಹಣ್ಣು / ಕಡಲೆಕಾಯಿ ಚಿಕ್ಕಿಗಳನ್ನು (ಸಸ್ಯಾಹಾರಿಗಳಿಗೆ) ದಿನಕ್ಕೆ 6 ರೂಪಾಯಿಗಳ ವೆಚ್ಚದಲ್ಲಿ 46 ದಿನಗಳ ಮಧ್ಯಾಹ್ನದ ಊಟದ ಜೊತೆಗೆ 45 ಲಕ್ಷಕ್ಕೂ ಹೆಚ್ಚು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿಯವರೆಗಿನ ಮಕ್ಕಳಿಗೆ ನೀಡಲಾಗುತ್ತದೆ.
‘ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ’ ಯೋಜನೆಯಡಿ ಪೂರಕ ಪೌಷ್ಟಿಕಾಂಶವನ್ನು ನೀಡಲಾಗುತ್ತಿದ್ದು, ಶೇ 60ರಷ್ಟು ಹಣವನ್ನು ರಾಜ್ಯ ಸರ್ಕಾರ ಮತ್ತು ಉಳಿದವು ಕೇಂದ್ರ ಸರ್ಕಾರದಿಂದ ಬರುತ್ತಿದೆ. ‘ಆಹಾರ ನಮ್ಮ ಹಕ್ಕು’ ಎಂಬ ನಾಗರಿಕರ ಗುಂಪು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಮೊಟ್ಟೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ವಿವಾದ ಎಬ್ಬಿಸಿದ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್: ಕೇಂದ್ರ ಸರ್ಕಾರದ ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುತ್ತಿರುವುದನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡಲು ಏಕೆ ನಿರ್ಧಾರ ಕೈಗೊಂಡಿದೆ, ಮೊಟ್ಟೆ ಮಾತ್ರ ಪೌಷ್ಠಿಕಾಂಶ ಹೊಂದಿರುವ ಏಕೈಕ ಆಹಾರವೇ, ಸರ್ಕಾರ ಕೈಗೊಂಡಿರುವ ಈ ಯೋಜನೆಯಿಂದ ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳನ್ನು ಹೊರಗಿಟ್ಟಂತಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುವಂತೆ ನಮ್ಮ ನೀತಿಗಳನ್ನು ರೂಪಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಅವರ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಪೌಷ್ಠಿಕ ಆಹಾರ ಮಕ್ಕಳ ಹಕ್ಕನ್ನು ರಕ್ಷಿಸಿ, ಪೌಷ್ಟಿಕತಜ್ಞರು, ಕಾರ್ಯಕರ್ತರು, ಸಂಶೋಧಕರು, ವೈದ್ಯರು ಮತ್ತು ಕರ್ನಾಟಕದ ನಾಗರಿಕರ ವೇದಿಕೆ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮಾ ಅವರಿಗೆ ಪತ್ರ ಬರೆದಿವೆ.
ಶಾಲಾ ಮಕ್ಕಳಿಗಾಗಿ ಊಟ ವಿತರಿಸುವ ಅದಮ್ಯ ಚೇತನವನ್ನು ನಡೆಸುತ್ತಿರುವ ತೇಜಸ್ವಿನಿ ಅನಂತ್ ಕುಮಾರ್, ಮೊಟ್ಟೆಗಳು ಮಾಂಸಾಹಾರಿ ಆಹಾರ ವರ್ಗಕ್ಕೆ ಸೇರುತ್ತವೆ ಎಂದು ಹೇಳುತ್ತಾರೆ.
My statement…#ChildFriendlyPolicy#NutritionForAll pic.twitter.com/2UNrfdRKqE
— Tejaswini AnanthKumar (@Tej_AnanthKumar) August 2, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App