Online Desk
ಬೆಳಗಾವಿ: ಆರೋಗ್ಯ ಸೇವೆಗಳಿಗೆ ಜಗತ್ತಿನಲ್ಲಿ ಇಂದು ಅಪಾರ ಬೇಡಿಕೆಯಿದೆ,.ಆದರೆ, ಅವುಗಳ ದುಬಾರಿ ದರದಿಂದಾಗಿ ಜನರ ಕೈಗೆಟುಕುತ್ತಿಲ್ಲ. ಈ ಕಂದಕವನ್ನು ಹೊಸ ಪೀಳಿಗೆಯ ವೈದ್ಯಕೀಯ ಪದವೀಧರರು ಮುಚ್ಚಿ, ಸಮುದಾಯಗಳ ಮಟ್ಟದಲ್ಲಿ ಭರವಸೆ ಹುಟ್ಟಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.
ಕೆಎಲ್ ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನ 12ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಜೀವನ ಶೈಲಿಯ ಸಂಕೀರ್ಣತೆ ಮತ್ತು ಆಹಾರ ಕ್ರಮಗಳ ದೋಷದಿಂದ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಗೆ ಮತ್ತಷ್ಟು ಮಾನವೀಯ ಆಯಾಮದ ಅಗತ್ಯವಿದೆ. ಇಲ್ಲದೆ ಹೋದರೆ ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾಯೋಗಿಕತೆ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ದೇಶ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ಗುಣಮಟ್ಟದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಲೆ ಎತ್ತಿ, ಶೈಕ್ಷಣಿಕ ಕ್ರಾಂತಿ ಸಂಭವಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಎನ್ ಇಪಿ ದೇಶಿಯ ಮಾದರಿಯ ಸರ್ವಾಂಗೀಣ ಕಲಿಕೆಯನ್ನು ಮುನ್ನೆಲೆಗೆ ತರುತ್ತಿದೆ. ಇದರಿಂದ ಸುಸ್ಥಿರ ಮತ್ತು ಸಮಾನತೆಯನ್ನು ಆಧರಿಸಿದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಎನ್ ಇಪಿಯಲ್ಲಿ ಮೌಲ್ಯಗಳ ಜೊತೆಗೆ ಸಮಾಜಮುಖಿ ಶಿಕ್ಷಣವನ್ನು ಕೊಡಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದಲೇ ಎನ್ ಇಪಿ ಅನುಷ್ಠಾನವಾಗಿದೆ ಎಂದು ಅವರು ತಿಳಿಸಿದರು.
Indeed honored to be part of the 12th conference of the K.L.E. Academy of Higher Education and Research.
The university has always promoted sustainable development of Higher Education, building self-reliant global citizens. My best wishes to graduating students. pic.twitter.com/njqoHSlMLv
— Dr. Ashwathnarayan C. N. (@drashwathcn) August 3, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App