PTI
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ಆರನೇ ದಿನವಾದ ಬುಧವಾರ ಸ್ಕ್ವಾಷ್ನಲ್ಲಿ ಭಾರತದ ಸೌರವ್ ಘೋಷಾಲ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು ಇತಿಹಾಸದಲ್ಲಿ ಕಾಮನ್ವೆಲ್ತ್ ಗೇಮ್ಸ್ ಸಿಂಗಲ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಸ್ಕ್ವಾಷ್ ಆಟಗಾರಾರ ಎಂಬ ಗೌರವಕ್ಕೆ ಸೌರವ್ ಘೋಷಾಲ್ ಪಾತ್ರರಾಗಿದ್ದಾರೆ.
ಇಂದು ನಡೆದ ಸ್ಕ್ವಾಷ್ ಪಂದ್ಯದಲ್ಲಿ 35 ವರ್ಷದ ಸೌರವ್ ಘೋಷಾಲ್ ಅವರು ಆತಿಥೇಯ ಇಂಗ್ಲೆಂಡ್ ಆಟಗಾರ ಜೇಮ್ಸ್ ವಿಲ್‌ಸ್ಟ್ರೋಪ್ ಅವರನ್ನು 3-0 ಅಂತರದಿಂದ ಸೋಲಿಸುವ ಮೂಲಕ ಕಂಚಿನ ಪದಕ ಪಡೆದರು. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಇದನ್ನು ಓದಿ: ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್: ಬೆಳ್ಳಿ ಗೆದ್ದ ರಿಲೇ ತಂಡ, ರಾಜ್ಯದ ಪ್ರಿಯಾ ಮೋಹನ್ ಗೆ 5 ಲಕ್ಷ ನಗದು ಪುರಸ್ಕಾರ
1998 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಅನ್ನು ಸೇರಿಸಲಾಯಿತು. ಆದರೆ ಭಾರತ ಅದರಲ್ಲಿ ಕೇವಲ 4 ಪದಕಗಳನ್ನು ಮಾತ್ರ ಪಡೆದುಕೊಂಡಿದೆ. ಇದರಲ್ಲಿ ಕೊನೆಯ ಮೂರು ಪದಕಗಳು ಬಂದಿದ್ದು ಡಬಲ್ಸ್‌ನಲ್ಲಿ ಮಾತ್ರ. ಈಗ ಮೊದಲ ಬಾರಿಗೆ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App