ANI
ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆಯೇ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಮಂಕಿಪಾಕ್ಸ್ ಗೆ ಲಸಿಕೆ ಅಭಿವೃದ್ಧಿ ಕುರಿತು ಚಿಂತನೆ: ಆಧಾರ್ ಪೂನಾವಾಲ ಮಹತ್ವದ ಘೋಷಣೆ
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಾವಾಲ, ಮಂಕಿಪಾಕ್ಸ್ ಲಸಿಕೆಗಾಗಿ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ; ಈ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಮಂಕಿಪಾಕ್ಸ್‌ಗೆ ಲಸಿಕೆ ಮತ್ತು ಅದರ ಅಗತ್ಯವಿದ್ದಲ್ಲಿ ನಾವು ಸಂಶೋಧನೆ ನಡೆಸುತ್ತೇವೆ ಎಂದು ತಿಳಿಸಿದರು.
After meeting with Union Health Min Mansukh Mandaviya, SII CEO Adar Poonawalla said, “my meeting went well like always. All preparations for the vaccine are being done; I briefed the minister on this. We are researching on the vaccine for Monkeypox & if there’s a need for it.” pic.twitter.com/r8L9VxuKK4
— ANI (@ANI) August 2, 2022
ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲದಿದ್ದರೂ ಆಫ್ರಿಕಾದ ಮೂಲದ 35 ವರ್ಷದ ವ್ಯಕ್ತಿಯೊಬ್ಬರಿಗೆ ದೆಹಲಿಯಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಕಂಡುಬಂದ ನಂತರ ಈ ಬೆಳವಣಿಗೆಯಾಗಿದೆ. ಮಂಕಿಪಾಕ್ಸ್ ರೋಗ ಲಕ್ಷಣದ ವ್ಯಕ್ತಿಯನ್ನು ದೆಹಲಿಯ ಎಲ್ ಎನ್ ಜೆಪಿ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದೆ. ಮೊದಲ ಮಂಕಿಪಾಕ್ಸ್ ರೋಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App