Online Desk
ಬೆಂಗಳೂರು: ‘ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!. ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ ಅಥವಾ ಬಿಜೆಪಿvsಬಿಜೆಪಿ ಜಟಾಪಟಿಯ ಮುಂದುವರೆದ ಭಾಗವೇ? ಅಥವಾ ವಲಸಿಗ ಬಸವರಾಜ ಬೊಮ್ಮಾಯಿ ವಿರುದ್ದದ ಅಸಹನೆಯೇ’ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಭಾಷಣಕೋರ!. ಬಸವರಾಜ ಬೊಮ್ಮಾಯಿ ಅವರೇ, ತಮ್ಮ ನಿಷ್ಕ್ರೀಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ? ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ?’ ಎಂದು ಆರೋಪಿಸಿದೆ.
MLAs complain that CM not even signs file may be lack of time
But he has all the time to watch Premier movies and shed tears. During the death of Movie Actor, he gave his three days to get involved.
If not this outrage he would have watched VIkrantRona for sure 14/n— Chakravarty Sulibele (@astitvam) August 1, 2022
‘ಮುಳುಗುತ್ತಿರುವ ಬಿಜೆಪಿ ಎಂಬ ಸಾವಿರ ರಂಧ್ರಗಳ ದೋಣಿಯನ್ನು ಮೇಲೆತ್ತಲು ಕೇಂದ್ರ ಸಚಿವರು ಬರುತ್ತಿದ್ದಾರಂತೆ!. ರಾಜ್ಯ ಬಿಜೆಪಿಗೆ, ಸಿಎಂಗೆ ಕೇಂದ್ರ ಸಚಿವರ ಭೇಟಿಯ ಮಾಹಿತಿಯೇ ಇಲ್ಲವೆಂದರೆ ಆಡಿಸಿದಂತೆ ಆಡುವ “ಬೊಂಬೆ ಬೊಮ್ಮಾಯಿ” ಮಾತ್ರ ಎನ್ನುವುದು ಸಾಬೀತಾಗಿದೆ!. ಅಂದಹಾಗೆ ಅಮಿತ್ ಶಾ ಅವರೇ ಇನ್ನೂ ನಿಮ್ಮ ಅಧ್ಯಕ್ಷರೇ? ಎಂದು ಟೀಕಿಸಿದೆ.
ಬಿಜೆಪಿಯ ಬಾಡಿಗೆ ಬಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!
ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ, #BJPvsBJP ಜಟಾಪಟಿಯ ಮುಂದುವರೆದ ಭಾಗವೇ? ಅಥವಾ
ವಲಸಿಗ @BSBommai ವಿರುದ್ದದ ಅಸಹನೆಯೇ @BJP4Karnataka?— Karnataka Congress (@INCKarnataka) August 2, 2022
‘ಈ ಸರ್ಕಾರದ ಅಕ್ರಮಗಳನ್ನು, ವೈಫಲ್ಯಗಳನ್ನು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೇ ಬಿಚ್ಚಿಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ನೀವೆಷ್ಟೇ ಸಂಘಪರಿವಾರಿ ವೇಷ ತೊಟ್ಟರೂ, ಅವರಿಗೆ ನೀವು ಪರಕೀಯರೆ! “ಕೇಶವನ ಕೃಪೆಯಿಂದ ಶೀಘ್ರಮೇವ ತೃತೀಯ ಸಿಎಂ ಪ್ರಾಪ್ತಿರಸ್ತು” ಎಂದು ಕೇಶವ ಕೃಪದಲ್ಲಿ ಹಾರೈಸಲಾಗುತ್ತಿದೆಯಂತೆ ನಿಜವೇ? ಎಂದು ಬೊಮ್ಮಾಯಿ ಅವರ ಕಾಲೆಳೆದಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App