Online Desk
ಚಿಕ್ಕಬಳ್ಳಾಪುರ: ಆಟವಾಡಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳವಾರ ಸಂಜೆ ಚಿಂತಾಮಣಿ ತಾಲೂಕಿನ ಕೊಡೆಗಂಡ್ಲು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕರನ್ನು ರಾಮ(10) ಲಕ್ಷ್ಮಣ(10) ಹಾಗೂ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಬಾಲಕರು ಶಾಲೆಯಿಂದ ಮನೆಗೆ ಬಂದ ನಂತರ ಕೆರೆ ಬಳಿ ಆಟವಾಡಲು ತೆರಳಿದ್ದರು. ಈ ವೇಳೆ ಬಾಲಕರು ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ.
ಇದನ್ನು ಓದಿ: ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ಕ್ರೂಸರ್ ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಾಯ
ಸ್ಥಳಿಯರು ಮೂವರು ಬಾಲಕರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ವೆಂಕಟೇಶ ಎಂಬುವರ ಅವಳಿ ಜವಳಿ ಮಕ್ಕಳು. ಮತ್ತು ಮುನಿರಾಜು ಎಂಬುವರ ಮಗ ಪ್ರಜ್ವಾಲ್ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App