The New Indian Express
ಆಗಸ್ಟ್- 5 ರಂದು ಮಾರ್ಟಿನ್ ಚಿತ್ರದ ಶೂಟಿಂಗ್ ಪುನಾರಂಭವಾಗಲಿದೆ. ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿರುವ ಧ್ರುವ ಸರ್ಜಾ ಆಗಸ್ಟ್ 5ರಿಂದ ಪುನಾರಂಭವಾಗುವ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಇನ್ನೂ 28 ದಿನಗಳ ಕಾಲ ಶೂಟಿಂಗ್ ಬಾಕಿ ಉಳಿದಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಬೇಕಿದೆ ಎಂದು ಹೇಳಿರುವ ನಿರ್ದೇಶಕ ಎಪಿ ಅರ್ಜುನ್, ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ನೀಡಿದ್ದಾರೆ.
ಈ ಮೊದಲು ಸೆಪ್ಬಂಬರ್ 30 ರಂದು ರಿಲೀಸ್ ಮಾಡಲು ನಿರ್ದೇಶಕರು ನಿರ್ದರಿಸಿದ್ದರು. ಹೀಗಾಗಿ ಶೀಘ್ರವೇ ಹೊಸ ದಿನಾಂಕ ಘೋಷಿಸಲಿದ್ದಾರೆ, ಇತ್ತೀಚೆಗೆ ಧ್ರುವ ಸರ್ಜಾ ಅಜ್ಜಿ ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಹೀಗಾಗಿ ದಿನಾಂಕ ಮರು ಹೊಂದಿಸಲು ಶೂಟಿಂಗ್ ಮುಂದೂಡಬೇಕಾಯಿತು. ನಾವು ಅವರಿಗೆ ತೊಂದರೆ ಕೊಡಲು ಬಯಸಲಿಲ್ಲ, ಈ ಶೂಟಿಂಗ್ ವೇಳೆ ನಾವು ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ರಿಲೀಸ್ ಡೇಟ್ ಫಿಕ್ಸ್!
ಉದಯ್ ಕೆ ಮೆಹ್ತಾ ನಿರ್ಮಿಸಿರುವ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಕಮರ್ಷಿಯಲ್ ಎಂಟರ್ಟೈನರ್ ಕನ್ನಡದಲ್ಲಿ ಬಾಲಿವುಡ್ ನಟ ನಿಕಿತಿನ್ ಧೀರ್ ಅವರ ಚೊಚ್ಚಲ ಚಿತ್ರವಾಗಿದೆ. ಸುಕೃತಾ ವಾಗ್ಲೆ ಮತ್ತು ಅನ್ವೇಶಿ ಜೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿ ಶರ್ಮಾ ಅವರ ಸಂಗೀತವಿದ್ದು, ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App