English Tamil Hindi Telugu Kannada Malayalam Android App
Sat. Dec 3rd, 2022

The New Indian Express

ಮಾಜಿ ಶಾಸಕ ಇವಾನ್ ನಿಗ್ಲಿ ಅವರು 16 ವರ್ಷ ವಯಸ್ಸಿನವರಾಗಿದ್ದಾಗ ಹೃದಯಬೇನೆ ಬಂದು ಮನೆಯಲ್ಲಿ ಕುಸಿದುಬಿದ್ದಿದ್ದರಂತೆ. ನರ್ಸ್ ಅವರು ಹತ್ತಿರದ ಆಸ್ಪತ್ರೆಯನ್ನು ತಲುಪಲು ಸಹಾಯ ಮಾಡಿದರು, ಅಲ್ಲಿ ಅವರು ಸಂಭವನೀಯ ಕ್ಷಯರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ವೈದ್ಯರು ಪರೀಕ್ಷಿಸಿದಾಗ ತಿಳಿಯಿತಂತೆ. ಅಂದಿನಿಂದ, ನಿಗ್ಲಿ ಅವರು ಸಮಾಜಕ್ಕೆ ಅವರ ನಿಸ್ವಾರ್ಥ ಸೇವೆಗಾಗಿ ನರ್ಸಿಂಗ್ ಸಮುದಾಯವನ್ನು ಗುರುತಿಸಲು ಏನನ್ನಾದರೂ ಮಾಡಲು ಬಯಸುತ್ತಿದ್ದರು. ಆದರೆ ಅವರ ಬಳಿ ಸಾಕಷ್ಟು ಸಂಪನ್ಮೂಲವಿರಲಿಲ್ಲ.

ತಮಗೆ ಮಾಡಿದ ಉಪಕಾರವನ್ನು ಸ್ಮರಿಸಿ ಅದನ್ನು ಸಮಾಜಕ್ಕೆ ಹಿಂತಿರುಗಿಸಲು ಇವಾನ್ ನಿಗ್ಲಿ ನಿರ್ಮಾಪಕರಾಗಿದ್ದಾರೆ. ಹೆಸರಾಂತ ಚಲನಚಿತ್ರ ನಿರ್ಮಾಪಕ ಡಾ ರಾಜಾ ಬಾಲಕೃಷ್ಣನ್ ನಿರ್ದೇಶನದ ಮುಂಬರುವ ಕನ್ನಡ ಚಲನಚಿತ್ರ ಸೆಪ್ಟೆಂಬರ್ 13, ಕಾಲೇಜು ಜೀವನದಿಂದ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡುವವರೆಗಿನ ನರ್ಸಿಂಗ್ ಸಮುದಾಯದ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.

ಕೋವಿಡ್ ಒಂದು ಮತ್ತು ಎರಡನೇ ಅಲೆಯ ವೇಳೆ ಜಗತ್ತು ಅನೇಕ ಸಮರ್ಪಿತ ದಾದಿಯರನ್ನು ಕಳೆದುಕೊಂಡಿದ್ದರೂ, ಅವರ ಕೆಲಸವು ಅನೇಕ ಕಡೆ ಗಮನಕ್ಕೆ ಬಂದಿಲ್ಲ. ಮಾರಣಾಂತಿಕ ವೈರಸ್‌ನಿಂದ ಹೊರಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನರ್ಸಿಂಗ್ ಸಮುದಾಯದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಈಗ ಅವರ ಸವಾಲುಗಳ ಬಗ್ಗೆ ಮಾತನಾಡಲು ನನಗೆ ಅವಕಾಶವಿದೆ, ಈ ಚಲನಚಿತ್ರವನ್ನು ದಾದಿಯರಿಗೆ ಸಮರ್ಪಿಸುತ್ತೇನೆ ಎಂದು ಕರ್ನಾಟಕದ ನರ್ಸಿಂಗ್ ಸೇವೆಗಳಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ಸ್ಥಾಪಿಸಿದ ನಿಗ್ಲಿ ಹೇಳುತ್ತಾರೆ.

ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕಥೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನರ್ಸಿಂಗ್ ಕಾಲೇಜಿನಿಂದ ಪದವಿ ಪಡೆದ ನಿತ್ಯಾ ಅವರ ಕಥೆಯನ್ನು ತೋರಿಸುತ್ತದೆ. ಪಾತ್ರವರ್ಗದಲ್ಲಿ ಹಿರಿಯ ನಟರಾದ ವಿನಯ ಪ್ರಸಾದ್, ಜೈ ಜಗದೀಶ್ ಮತ್ತು ಯಮುನಾ ಶ್ರೀನಿಧಿ ಕೂಡ ಇದ್ದಾರೆ. ಇದರಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಗ್ರಾಮದ ಶಾಸಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. “ಚಿತ್ರವು ನಷ್ಟ, ಪ್ರೀತಿ, ಒಡಹುಟ್ಟಿದವರ ಸಂಬಂಧ, ಸ್ನೇಹ ಮತ್ತು ಸಮಾಜದಲ್ಲಿ ಸಹೋದರತ್ವದ ಪ್ರಾಮುಖ್ಯತೆಯಂತಹ ವಿವಿಧ ವಿಷಯಗಳನ್ನು ಒಳಗೊಂಡಿದೆ” ಎಂದು ನಿಗ್ಲಿ ಹೇಳುತ್ತಾರೆ.

ಮನಃಶಾಸ್ತ್ರ ವಿದ್ಯಾರ್ಥಿ, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸೆಪ್ಟೆಂಬರ್ 13 ರ ತಯಾರಿಕೆಯು ಭಾವನಾತ್ಮಕ ಪ್ರಯಾಣವಾಗಿತ್ತು ಎಂದು ಅವರು ಹೇಳುತ್ತಾರೆ. “ನಾನು ನಿತ್ಯಾ ಪಾತ್ರವನ್ನು ನಿರ್ವಹಿಸುವಾಗ, ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು ಮತ್ತು ಭಾವನೆಗಳನ್ನು ಕಂಡಿದ್ದೇನೆ. ನಿಮ್ಮ ಆತ್ಮೀಯರು ನಿಮ್ಮ ಮುಂದೆ ಕೊನೆಯುಸಿರೆಳೆಯುವುದನ್ನು ಅಸಹಾಯಕತೆಯಿಂದ ನೋಡುವುದು ಒಂದು ಹೋರಾಟವಾಗಿದೆ ಎನ್ನುತ್ತಾರೆ. 

ಸೆಪ್ಟೆಂಬರ್ 13 ಚಿತ್ರ ಜೂನ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *