English Tamil Hindi Telugu Kannada Malayalam Android App
Mon. Dec 5th, 2022

The New Indian Express

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಪತ್ತೆಯಾಗಿದ್ದು, ರಾಜರಾಜೇಶ್ವರಿನಗರದ ಕಾಲೇಜಿನಲ್ಲಿ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ 5 ದಿನ ರಜೆ ಘೋಷಣೆ ಮಾಡಲಾಗಿದೆ.

ರಾಜರಾಜೇಶ್ವರಿನಗರದ ದೊಡ್ಡಬಿದರಕಲ್ಲು (ವಾರ್ಡ್ ನಂ. 40) ನಲ್ಲಿರುವ ಅನುಪಮಾ ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವ್ಯಾಸಂಗ ಮಾಡುತ್ತಿರುವ ಎಂಟು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆರೋಗ್ಯಾಧಿಕಾರಿಗಳು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಐದು ದಿನಗಳ ರಜೆಯನ್ನು ಘೋಷಿಸಿದೆ. ಎಲ್ಲಾ ವಿದ್ಯಾರ್ಥಿಗಳು ಲಕ್ಷಣರಹಿತರಾಗಿದ್ದು, ಎಲ್ಲರೂ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ 2 ದಿನವೂ 1000 ಗಡಿ ದಾಟಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 984 ಮಂದಿಗೆ ಪಾಸಿಟಿವ್; ಶೂನ್ಯ ಸಾವು!

ಆರೋಗ್ಯ ಇಲಾಖೆ ಸಿಬ್ಬಂದಿ ಶಾಲೆಗಳು, ಕಾಲೇಜುಗಳು, ಕಾರ್ಖಾನೆಗಳು ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಜೂನ್ 26 ರಂದು ಪರೀಕ್ಷೆಗೊಳಪಡಿಸಿದ 112 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿಗೆ ಪಾಸಿಟಿವ್ ಬಂದಿದೆ. ಸೋಂಕಿತರು ಅಂತರರಾಜ್ಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದು, ಇತರ 50 ವಿದ್ಯಾರ್ಥಿಗಳ RTPCR ಫಲಿತಾಂಶಗಳು ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳು ನಗರದ ಶಿಕ್ಷಣ ಸಂಸ್ಥೆಗಳಲ್ಲಿ ವರದಿಯಾದ ಐದನೇ ಕ್ಲಸ್ಟರ್ ಇದಾಗಿದ್ದು, ಇದಕ್ಕೂ ಮೊದಲು ದಾಸರಹಳ್ಳಿ ವಲಯದ ರಾಜಗೋಪಾಲನಗರ ವಾರ್ಡ್‌ನ ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆ ಮತ್ತು ಎಂಇಎಸ್ ಶಾಲೆಯಲ್ಲಿ ತಲಾ ಎರಡು ಕ್ಲಸ್ಟರ್‌ಗಳು ಪತ್ತೆಯಾಗಿದ್ದವು. ಆರ್‌ಆರ್‌ನಗರ ಈಗ ಮೂರು ಕ್ಲಸ್ಟರ್‌ಗಳನ್ನು ಹೊಂದಿದ್ದು, ಇದೇ ಕ್ಷೇತ್ರದ ಮದರ್ ತೆರೇಸಾ ನರ್ಸಿಂಗ್ ಕಾಲೇಜು ಮತ್ತು ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್‌ನ ಹಾಸ್ಟೆಲ್‌ನಲ್ಲಿ ಸೋಂಕಿತರು ಪತ್ತೆಯಾಗಿದ್ದರು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಅಬ್ಬರ: ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಇಳಿಕೆ

ಆದಾಗ್ಯೂ, ಹೊಸ ಕೋವಿಡ್ ಮಾರ್ಗಸೂಚಿಗಳು ಶಾಲೆಗಳು, ಕಾಲೇಜುಗಳು ಮತ್ತು ಕಛೇರಿಗಳಿಗೆ ಆಯಾ ಸ್ಥಳಗಳನ್ನು ಕೋವಿಡ್ ಪ್ರಕರಣಗಳು ಪತ್ತೆಯಾದ ಮರುದಿನವೇ, ನೈರ್ಮಲ್ಯೀಕರಣದ ನಂತರ ಮರುಬಳಕೆ ಮಾಡಲು ಅವಕಾಶ ಮಾಡಿಕೊಡುತ್ತದೆ.

ಇನ್ನು ರಾಜ್ಯದಲ್ಲಿ ಗುರುವಾರ 750 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 700 ಬೆಂಗಳೂರಿನವರು ಎಂದು ಆರೋಗ್ಯ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ. ಅವರಲ್ಲಿ 71 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ, ಏಳು ಮಂದಿ ಐಸಿಯುನಲ್ಲಿ ಮತ್ತು ಆರು ಮಂದಿ ಅಧಿಕ ಅವಲಂಬಿತ ಘಟಕದಲ್ಲಿ ಸೇರಿದಂತೆ 84 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಬೆಂಗಳೂರು ನಗರವು 28 ಕ್ಲಸ್ಟರ್‌ಗಳನ್ನು ಹೊಂದಿದ್ದು, ಆರ್‌ಆರ್ ನಗರ ಮತ್ತು ಮಹದೇವಪುರ ವಲಯಗಳಲ್ಲಿ ತಲಾ ಒಂದರಂತೆ ಎರಡು ಕ್ಲಸ್ಟರ್‌ಗಳಲ್ಲಿ ಐದರಿಂದ 14 ಪ್ರಕರಣಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *