Online Desk
ಚೆನ್ನೈ: ಇಂಗ್ಲೆಂಡ್ ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚಿನ ಗಳಿಕೆ ಕಂಡ ತಮಿಳು ಚಿತ್ರವಾಗಿ ‘ವಿಕ್ರಮ್’ ಹೊರಹೊಮ್ಮಿರುವ ಸುದ್ದಿಯ ನಡುವೆ ಸಿನಿಮಾದ ಬಿಗ್ ಸಕ್ಸಸ್ ಗಾಗಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಭಾನುವಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಮ್ಮುಖದಲ್ಲಿ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಚಿರಂಜೀವಿ, ವಿಕ್ರಮ್ ಅದ್ಬುತ ಸಕ್ಸಸ್ ಗಾಗಿ ಸಲ್ಲುಬಾಯಿ ಅವರೊಂದಿಗೆ ನನ್ನ ಆತ್ಮೀಯ ಹಳೆಯ ಮಿತ್ರ ಕಮಲ್ ಹಾಸನ್ ಅವರನ್ನು ಸನ್ಮಾನಿಸಿದ್ದು, ಖುಷಿ ತಂದಿದೆ ಎಂದಿದ್ದಾರೆ.
ಕಳೆದ ರಾತ್ರಿ ತಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಲೋಕೇಶ್ ಮತ್ತು ಅವರ ತಂಡ ಪಾಲ್ಗೊಂಡಿತ್ತು. ಎಂತಹ ತೀವ್ರತೆ ಹಾಗೂ ಥ್ರಿಲ್ಲಿಂಗ್ ಸಿನಿಮಾ ಅದು! ಕುಡೋಸ್ ಮೈ ಫ್ರೆಂಡ್, ನಿನಗೆ ಹೆಚ್ಚಿನ ಬಲ ತಂದಿದೆ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
Absolute joy,celebrating & honouring my dearest old friend @ikamalhaasan for the spectacular success of #Vikram along with my dearest Sallu Bhai @BeingSalmanKhan @Dir_Lokesh & team at my home last night.What an intense & thrilling film it is!!Kudos My friend!! More Power to you! pic.twitter.com/0ovPFK20r4
— Chiranjeevi Konidela (@KChiruTweets) June 12, 2022
ಜೂನ್ 7 ರಂದು ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಲೆಕ್ಸನ್ ಇಎಸ್ 300ಹೆಚ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಮಾರನೇ ದಿನ ನಟ ಸೂರ್ಯ ಅವರಿಗೆ ರೋಲೆಕ್ಸ್ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App