PTI
ಮನಿಲಾ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಪದಕದ ಭರವಸೆ ಮೂಡಿಸಿದ್ದ ಭಾರತದ ಷಟ್ಲರ್ ಪಿವಿ ಸಿಂದು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.
ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಶನಿವಾರ ಇಲ್ಲಿ ನಡೆದ ಮೂರು ಗೇಮ್ಗಳಲ್ಲಿ ಜಪಾನ್ನ ಅಕಾನೆ ಯಮಗುಚಿ ವಿರುದ್ಧ ಹೋರಾಡಿ ಕಂಚಿನ ಪದಕದೊಂದಿಗೆ ತಮ್ಮ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
26 ವರ್ಷ ವಯಸ್ಸಿನ ಸಿಂಧು ಆರಂಭದಲ್ಲಿ ಉತ್ತಮವಾಗಿ ಆರಂಭಿಸಿದರೂ, ಅದೇ ಆವೇಗವನ್ನುಪಂದ್ಯದುದಕ್ಕೂ ಮುಂದುವರಿಸಲು ಸಾಧ್ಯವಾಗಲಿಲ್ಲ. ಪರಿಣಾಮ 21-13 19-21 16-21 ಅಂತರದಲ್ಲಿ ಅಗ್ರ ಶ್ರೇಯಾಂಕದ ಮತ್ತು ವಿಶ್ವದ ನಂ.2 ಯಮಗುಚಿ ವಿರುದ್ಧ ಸೋತರು.
ಮೊದಲ ಗೇಮ್ ಅನ್ನು 16 ನಿಮಿಷಗಳಲ್ಲಿ ಸುಲಭವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡ ಸಿಂಧು, ಎರಡನೇ ಗೇಮ್ನಲ್ಲಿ, ನಾಲ್ಕನೇ ಶ್ರೇಯಾಂಕದ ಸಿಂಧು ಪಾಯಿಂಟ್ಗಳ ನಡುವೆ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಪಾಯಿಂಟ್ ಪೆನಾಲ್ಟಿ ನೀಡಲಾಯಿತು. ಈ ವೇಳೆ ಕ್ರೀಡಾಂಗಣದಲ್ಲಿ ರೆಫರಿಯೊಂದಿಗಿನ ವಾಗ್ವಾದಕ್ಕೂ ಕಾರಣವಾಗಿತ್ತು. ಅಂತಿಮ ಗೇಮ್ನಲ್ಲಿ ಸಿಂಧು ಆರಂಭದಲ್ಲೇ ಹಿನ್ನಡೆ ಕಂಡ ಪರಿಣಾಮ ಕೊನೆಯಲ್ಲಿ, ಯಮಗುಚಿ ಐದು ಮ್ಯಾಚ್ ಪಾಯಿಂಟ್ಗಳೊಂದಿಗೆ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಈ ಪಂದ್ಯದ ಸೋಲಿನ ಮೂಲಕ ಸಿಂಧು ಮತ್ತು ಯಮಗುಚಿ ನಡುವಿನ ಮುಖಾಮುಖಿಯು ಈಗ 13-9 ಆಗಿದೆ. ಅಂತೆಯೇ ಸಿಂಧು ಸೋಲಿನೊಂದಿಗೆ ವೈಯಕ್ತಿಕ ಕಾಂಟಿನೆಂಟಲ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿದೆ. ಪಂದ್ಯ ಸೋತರೂ ಸಿಂಧು ಕಂಚಿನ ಪದಕ ಪಡೆದದ್ದು ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.
ಟೂರ್ನಿಯಲ್ಲಿ ಸಿಂಧು ಗಳಿಸಿದ ಎರಡನೇ ಪದಕ ಇದಾಗಿದ್ದು, ಈ ಹಿಂದೆ ಅವರು 2014ರ ಗಿಮ್ಚಿಯಾನ್ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಹಿಂದೆ ಸಿಂಧು ಸೈಯದ್ ಮೋದಿ ಇಂಟರ್ನ್ಯಾಶನಲ್ ಮತ್ತು ಸ್ವಿಸ್ ಓಪನ್ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App