English Tamil Hindi Telugu Kannada Malayalam Google news Android App
Wed. Feb 1st, 2023

PTI

ಕೇಂಬ್ರಿಡ್ಜ್: ಭಾರತದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. 

ಸೋಮವಾರ ಸಂಜೆ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಿದ್ದ ”ಇಂಡಿಯಾ ಅಟ್ 75′ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಮಾತುಗಳ ಮೇಲೆ ಪ್ರಹಾರ ನಡೆಸುತ್ತಿರುವಂತೆ, ಆ ಜಾಗಗಳನ್ನು ಪ್ರಭಾವಿಗಳು ಪ್ರವೇಶಿಸುತ್ತಿದ್ದು, ದೇಶದಲ್ಲಿ ನಡೆಯುವ ಸಂಭಾಷಣೆಗಳ ರೀತಿಯನ್ನು ಮರು ವ್ಯಾಖ್ಯಾನ ಮಾಡುತ್ತಿವೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು, ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್ ಪಕ್ಷದ ಒಳಗೆ ಗಾಂಧಿ ಕುಟುಂಬದ ಪಾತ್ರ, ದೇಶದ ಜನರನ್ನು ಸಂಘಟಿಸುವ ಪ್ರಯತ್ನಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು. ಈ ವೇಳೆ ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆ ಕುರಿತಾದ ಪ್ರಶ್ನೆಗೆ ಅವರು ಭಾವುಕರಾದರು.

ಇದನ್ನು ಓದಿ: 2024ರ ಚುನಾವಣೆಗೆ ಮೂರು ತಂಡಗಳನ್ನು ರಚಿಸಿದ ಸೋನಿಯಾ ಗಾಂಧಿ

“ನಮ್ಮ ಪಾಲಿಗೆ, ಭಾರತ ಮಾತನಾಡಿದಾಗ ಭಾರತ ಜೀವಂತ ಇರುತ್ತದೆ. ಭಾರತ ಮೌನವಾದಾಗ ಭಾರತ ಸಾಯುತ್ತದೆ. ಭಾರತಕ್ಕೆ ಮಾತನಾಡಲು ಅವಕಾಶ ನೀಡುವಂತಹ ಸಂಸತ್, ಚುನಾವಣಾ ವ್ಯವಸ್ಥೆಯಂತಹ ಸಂಸ್ಥೆಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಗಳನ್ನು ನೋಡಿದಾಗ ಪ್ರಜಾಪ್ರಭುತ್ವದ ಮೂಲ ರಚನೆಗಳನ್ನು ಒಂದು ಸಂಘಟನೆ ತನ್ನ ಹಿಡಿತದಲ್ಲಿ ಇರಿಸಿಕೊಂಡಿರುವುದು ಕಾಣಿಸುತ್ತದೆ. ಒಂದು ವಿಷಯ ಚರ್ಚೆಯಲ್ಲಿದ್ದಾಗ, ಸರ್ಕಾರದ ಪ್ರಭಾವಿ ಶಕ್ತಿಗಳು ಮಧ್ಯ ಪ್ರವೇಶಿಸಿ ಆ ಚರ್ಚೆಗಳ ಹಾದಿಯನ್ನು ತಪ್ಪಿಸುತ್ತವೆ” ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *