PTI
ನವದೆಹಲಿ: 682 ಭಾರತೀಯ ಕೈದಿಗಳು ತನ್ನ ರಾಷ್ಟ್ರದ ಜೈಲಿನಲ್ಲಿ ಬಂಧನದಲ್ಲಿರುವುದಾಗಿ ಪಾಕಿಸ್ತಾನ ಗುರುವಾರ ಖಚಿತಪಡಿಸಿದೆ.
2008ರ ಒಪ್ಪಂದದ ವಿನಾಯಿತಿಯಂತೆ ಭಾರತ ಮತ್ತು ಪಾಕಿಸ್ತಾನ ತಮ್ಮ ರಾಷ್ಟ್ರದಲ್ಲಿ ಬಂಧನದಲ್ಲಿರುವ ನಾಗರಿಕ ಖೈದಿಗಳು ಹಾಗೂ ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಜನವರಿ 1 ಮತ್ತು ಜುಲೈ 1 ರಂದು ವರ್ಷಕ್ಕೆ ಎರಡು ಬಾರಿ ಈ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ!
49 ನಾಗರಿಕರು ಮತ್ತು 633 ಮೀನುಗಾರರು ಸೇರಿದಂತೆ 682 ಭಾರತೀಯ ಕೈದಿಗಳನ್ನು ಬಂಧನದಲ್ಲಿಡಲಾಗಿದೆ ಎಂದು ಭಾರತೀಯ ಹೈಕಮೀಷನರ್ ಅವರೊಂದಿಗೆ ಪಾಕಿಸ್ತಾನ ಮಾಹಿತಿ ಹಂಚಿಕೊಂಡಿರುವುದಾಗಿ ಪಾಕ್ ವಿದೇಶಾಂಗ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಭಾರತ ಕೂಡಾ ಮಾಹಿತಿ ನೀಡಿದ್ದು, ಪಾಕಿಸ್ತಾನದ 346 ನಾಗರಿಕರು, 116 ಮೀನುಗಾರರು ಸೇರಿದಂತೆ ದೇಶದಲ್ಲಿರುವ 461 ಪಾಕಿಸ್ತಾನದ ಕೈದಿಗಳ ಪಟ್ಟಿಯನ್ನು ಭಾರತ ಹಂಚಿಕೊಂಡಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App