The New Indian Express
ಬಾಲಿವುಡ್ನಲ್ಲಿ ಜೋಧಾ ಅಕ್ಬರ್, ಚೆನ್ನೈ ಎಕ್ಸ್ಪ್ರೆಸ್ ಮತ್ತು ‘ರೆಡಿ’ಯಂತಹ ಚಿತ್ರಗಳ ಮೂಲಕ ಹೆಸರುವಾಸಿಯಾದ ನಿಕಿತಿನ್ ಧೀರ್, ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಎಪಿ ಅರ್ಜುನ್ ನಿರ್ದೇಶನದ ಬಹುಭಾಷಾ ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ನಲ್ಲಿ ನಿಕಿತಿನ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಅವರು ವೈಜಾಗ್ ನಲ್ಲಿ ಮಾರ್ಟಿನ್ ಚಿತ್ರೀಕರಣದಲ್ಲಿದ್ದಾರೆ. ಸೆಪ್ಟೆಂಬರ್ 30 ರಂದು ಬಿಡುಗಡೆಯ ದಿನಾಂಕವನ್ನು ಘೋಷಿಸಿದ ನಂತರ ನಿರ್ದೇಶಕರು ಹಗಲಿರುಳು ಶೂಟಿಂಗ್ ನಡೆಸುತ್ತಿದ್ದಾರೆ.
ಕೇವಲ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಉಳಿದಿದ್ದು, ಜುಲೈ 5 ರಿಂದ ಅದರ ಶೂಟಿಂಗ್ ಪ್ರಾರಂಭವಾಗಲಿದೆ. ಇದರ ನಂತರ ಹಾಡಿನ ಸೀಕ್ವೆನ್ಸ್ಗಳನ್ನು ಚಿತ್ರೀಕರಿಸಲಾಗುವುದು. ಎಪಿ ಅರ್ಜುನ್ ಏಕಕಾಲದಲ್ಲಿ ಪೋಸ್ಟ್-ಪ್ರೊಡಕ್ಷನ್ ಕೂಡ ಆರಂಭಿಸಿದ್ದಾರೆ. ‘ಅದ್ಧೂರಿ’ ನಂತರ ಧ್ರುವ ಸರ್ಜಾ ಮತ್ತು ಅರ್ಜುನ್ ಮಾರ್ಟಿನ್ ಮೂಲಕ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ರಿಲೀಸ್ ಡೇಟ್ ಫಿಕ್ಸ್!
ಉದಯ್ ಕೆ ಮೆಹ್ತಾ ಅವರ ಬೆಂಬಲದೊಂದಿಗೆ, ಮಾರ್ಟಿನ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ, ಇದರಲ್ಲಿ ಸುಕೃತಾ ವಾಗ್ಲೆ ಮತ್ತು ಅನ್ವೇಶಿ ಜೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದು, ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App