PTI
ಕೆಜಿಎಫ್ ಚಾಪ್ಟರ್ 2′ ನಿರ್ಮಾಪಕ ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’ನಿಂದ ಸಾಲು ಸಾಲು ಸಿನಿಮಾಗಳು ಘೋಷಣೆ ಆಗುತ್ತಲೇ ಇವೆ. ಈಚೆಗಷ್ಟೇ ಅವರು ತಮ್ಮ ಬ್ಯಾನರ್ನಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಘೋಷಣೆ ಆಗಲಿವೆ ಎಂದು ಹೇಳಿದ್ದರು.
ಇದೀಗ ಒಂದು ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ, ಈ ಬಾರಿ ಹೊಂಬಾಳೆ ಫಿಲ್ಮ್ಸ್ ಮಲಯಾಳಂ ‘ಸೂಪರ್ ಸ್ಟಾರ್’ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಕೈಜೋಡಿಸಿದೆ. ಪೃಥ್ವಿರಾಜ್ ನಟಿಸಿ, ನಿರ್ದೇಶಿಸಲಿರುವ ಹೊಸ ಸಿನಿಮಾಕ್ಕೆ ‘ಟೈಸನ್’ ಎಂದು ಹೆಸರು ಇಡಲಾಗಿದ್ದು, ಅದನ್ನು ಐದು ಭಾಷೆಗಳಲ್ಲಿ ತೆರೆಗೆ ತರಲು ‘ಹೊಂಬಾಳೆ ಫಿಲ್ಮ್ಸ್’ ಸಜ್ಜಾಗಿದೆ.
ಟೈಸನ್’ ಸಿನಿಮಾವು ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಆಗಿದ್ದು, ಜೊತೆಗೆ ಸಾಮಾಜಿಕ ವಿಚಾರಗಳು ಇರಲಿವೆಯಂತೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಪೃಥ್ವಿರಾಜ್ ಸುಕುಮಾರನ್ ಮಾಡಲಿದ್ದಾರೆ.
ಮೋಹನ್ ಲಾಲ್ ನಟನೆಯ ‘ಲೂಸಿಫರ್’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆದ ಪೃಥ್ವಿರಾಜ್, ಮೊದಲ ಯತ್ನದಲ್ಲೇ ಯಶಸ್ಸು ಪಡೆದುಕೊಂಡಿದ್ದರು. ನಂತರ ‘ಬ್ರೋ ಡ್ಯಾಡಿ’ ಸಿನಿಮಾ ನಿರ್ದೇಶಿಸಿದ್ದ ಅವರು, ಈಗ ‘ಲೂಸಿಫರ್’ ಸಿನಿಮಾದ ಸಿಕ್ವೇಲ್ ‘ಎಂಪುರಾನ್’ ನಿರ್ದೇಶನ ಮಾಡುತ್ತಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ, ‘ಟೈಸನ್’ ಕೈಗೆತ್ತಿಕೊಳ್ಳಲಿದ್ದಾರೆ. ಇದು ಪೃಥ್ವಿರಾಜ್ ನಿರ್ದೇಶನದ ನಾಲ್ಕನೇ ಸಿನಿಮಾವಾಗಿದೆ. ಇನ್ನು, ‘ಟೈಸನ್’ಗೆ ಸ್ಕ್ರಿಪ್ಟ್ ಮಾಡಿರುವುದು ನಟ ಮುರಳಿ ಗೋಪಿ. ಪೃಥ್ವಿರಾಜ್ ಅವರ ಹಿಂದಿನ ಸಿನಿಮಾಗಳಿಗೂ ಮುರಳಿ ಗೋಪಿ ಅವರದ್ದೇ ಸ್ಕ್ರಿಪ್ಟ್ ಇದೆ.
ಇದನ್ನೂ ಓದಿ: ‘ಕೆಜಿಎಫ್-3 ಬಗ್ಗೆ ದೊಡ್ಡದಾಗಿ ಮಾಹಿತಿ ನೀಡುತ್ತೇವೆ’: ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
‘ಸಲಾರ್’ ಮೂಲಕ ಟಾಲಿವುಡ್ಗೆ ಭರ್ಜರಿ ಎಂಟ್ರಿ ನೀಡಿರುವ ಹೊಂಬಾಳೆ ಫಿಲ್ಮ್ಸ್, ಈಗ ‘ಟೈಸನ್’ ಮೂಲಕ ಮಾಲಿವುಡ್ಗೆ ಕಾಲಿಟ್ಟಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಇದು ದೊಡ್ಡಮಟ್ಟದ ಸಿನಿಮಾವಾಗಲಿದೆ ಎಂಬ ಮಾಹಿತಿ ಇದೆ. 2023ರ ಅಂತ್ಯದಲ್ಲಿ ಶೂಟಿಂಗ್ ಆರಂಭಿಸಿ, 2024ರಲ್ಲಿ ಅದ್ದೂರಿಯಾಗಿ ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
#TYSON
Presenting my 4th directorial, next after Empuraan – L2. With co creator Murali Gopy. This time with #HombaleFilms! Thank you #VijayKiragandur for the trust.@hombalefilms @VKiragandur @PrithviOfficial #muraligopy pic.twitter.com/CFmXohP9Fx— Prithviraj Sukumaran (@PrithviOfficial) June 10, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App