English Tamil Hindi Telugu Kannada Malayalam Android App
Mon. Dec 5th, 2022

Online Desk

ಬೆಂಗಳೂರು: ಮೇ 16 ರಿಂದ 22ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೊಂಡಿದೆ.

ಈ ಕುರಿತು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ್ ಅವರು, ಮೇ 16 ರಂದು ಸಂಜೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ಏಷ್ಯಾ ಕಪ್: 20 ಆಟಗಾರರ ತಂಡ ಪ್ರಕಟಿಸಿದ ಹಾಕಿ ಇಂಡಿಯಾ, ರೂಪಿಂದರ್ ಪಾಲ್ ಗೆ ನಾಯಕತ್ವ

ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರದಿಂದ ಎರಡೂವರೆ ಕೋಟಿ ರೂ. ಬಿಡುಗಡೆಯಾಗಿದೆ. 21 ಕ್ರೀಡಾ ಸ್ಫರ್ಧೆಗಳು ಇರಲಿವೆ. 14 ವಯಸ್ಸಿನೊಳಗಿನ ಒಟ್ಟು 5 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ಮಿನಿ ಒಲಿಂಪಿಕ್ ಕ್ರೀಡಾಕೂಟ ಆಯೋಜನೆಯಾಗುತ್ತಿರುವುದು ಇದು ಎರಡನೇ ಬಾರಿ ಎಂದು ಗೋವಿಂದರಾಜ್ ಹೇಳಿದರು.

ಅಥ್ಲೆಟಿಕ್ಸ್, ಅರ್ಚರಿ, ಬ್ಯಾಟ್ ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಭಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೋಖೋ, ಲಾನ್ ಟೆನ್ನಿಸ್, ನೆಟ್ ಬಾಲ್, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ವೇಟ್ ಲಿಫ್ಟಿಂಗ್ ಸ್ಫರ್ಧೆಗಳು ಇರಲಿವೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *