English Tamil Hindi Telugu Kannada Malayalam Android App
Mon. Dec 5th, 2022

ANI

ಕಠ್ಮಂಡು: ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ ವಿಮಾನವು ಪರ್ವತ ಜಿಲ್ಲೆ ಮುಸ್ತಾಂಗ್‌ನ ಕೊವಾಂಗ್ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

‘ಸ್ಥಿತಿ ಇನ್ನೂ ಖಚಿತವಾಗಿಲ್ಲ. ಪ್ರದೇಶದ ಪರಿಶೀಲನೆ ನಡೆಯಬೇಕಿದೆ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ಖಚಿತಪಡಿಸಿದ್ದಾರೆ.

ಸ್ಥಳೀಯರು ನೇಪಾಳ ಸೇನೆಗೆ ನೀಡಿದ ಮಾಹಿತಿಯ ಪ್ರಕಾರ, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ನ ಲಾಮ್ಚೆ ನದಿಯ ಮುಖಾಂತರ ಪತನಗೊಂಡಿದೆ. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಸ್ಥಳದ ಕಡೆಗೆ ತೆರಳುತ್ತಿದ್ದಾರೆ ಎಂದು ಸೇನಾ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ.

ಇಂದು ಬೆಳಗ್ಗೆ ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು 4 ಭಾರತೀಯರು ಮತ್ತು 3 ಜಪಾನ್ ಪ್ರಜೆಗಳು ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊ ಬೆಳಿಗ್ಗೆ 9:55ಕ್ಕೆ ಪೊಖರಾದಿಂದ ಜೋಮ್‌ಸಮ್‌ಗೆ ಪ್ರಮಾಣಿಸುತ್ತಿತ್ತು. ಮುಸ್ತಾಂಗ್‌ನ ಲೆಟೆ ಪ್ರದೇಶವನ್ನು ತಲುಪಿದ ನಂತರ ಸಂಪರ್ಕ ಕಳೆದುಕೊಂಡಿತ್ತು ಎಂದು  ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರು.

ಇದನ್ನೂ ಓದಿ: ನೇಪಾಳ: 4 ಭಾರತೀಯರು ಸೇರಿ 22 ಜನರಿದ್ದ ವಿಮಾನ ನಾಪತ್ತೆ, ಅಪಘಾತಕ್ಕೀಡಾಗಿರುವ ಶಂಕೆ

ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನವು ಮುಸ್ತಾಂಗ್ ಜಿಲ್ಲೆಯ ಲೆಟೆಯ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಶಂಕಿಸಲಾಗಿದೆ. ಟಿಟಿಯ ಸ್ಥಳೀಯರು ಕರೆ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಪ್ರದೇಶಕ್ಕೆ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗುತ್ತಿದೆ ಎಂದು ಮುಸ್ತಾಂಗ್‌ನ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್‌ಪಿ ರಾಮ್ ಕುಮಾರ್ ದಾನಿ ಎಎನ್‌ಐಗೆ ತಿಳಿಸಿದರು.

ನಾಪತ್ತೆಯಾಗಿರುವ ವಿಮಾನಗಳ ಹುಡುಕಾಟಕ್ಕಾಗಿ ಗೃಹ ಸಚಿವಾಲಯವು ಮುಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಕೂಡ ಶೋಧಕ್ಕಾಗಿ ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫಡಿಂದ್ರ ಮಣಿ ಪೋಖರೆಲ್ ಫೋನ್ ಮೂಲಕ ಎಎನ್‌ಐಗೆ ತಿಳಿಸಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *