English Tamil Hindi Telugu Kannada Malayalam Android App
Sat. Dec 3rd, 2022

PTI

ಕಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ 22 ಮಂದಿಯನ್ನು ಹೊತ್ತು ಸಾಗುತ್ತಿದ್ದ ತಾರಾ ವಿಮಾನ ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಅದರ ಅವಶೇಷಗಳು ಪತ್ತೆಯಾದ ಸ್ಥಳದಿಂದ ಕೊನೆಯ ಮೃತದೇಹವನ್ನು ಹೊರತೆಗೆಯುವ ಮೂಲಕ ಎಲ್ಲ ಪ್ರಯಾಣಿಕರ ಮೃತದೇಹ ಸಿಕ್ಕಿದೆ ಎಂದು ನೇಪಾಳ ಸೇನೆ ಮಂಗಳವಾರ ತಿಳಿಸಿದೆ. 

ಮೊನ್ನೆ ಭಾನುವಾರ ಪರ್ವತಮಯ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡ ತಾರಾ ಏರ್ ವಿಮಾನದ ಅವಶೇಷಗಳ ಸ್ಥಳದಿಂದ ರಕ್ಷಕರು 21 ಶವಗಳನ್ನು ವಶಪಡಿಸಿಕೊಂಡ ಒಂದು ದಿನದ ನಂತರ, ಕೊನೆಯ ದೇಹವನ್ನು ಪಡೆಯಲು ನೇಪಾಳದ ಅಧಿಕಾರಿಗಳು ಶೋಧಕಾರ್ಯ ಪುನರಾರಂಭಿಸಿದರು.

ಕೊನೆಯ ಮೃತದೇಹ ಪತ್ತೆಯಾಗಿದೆ. ಅಪಘಾತದ ಸ್ಥಳದಿಂದ ಉಳಿದ 12 ಮೃತ ದೇಹಗಳನ್ನು ಕಠ್ಮಂಡುವಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ರಾತ್ರಿಯ ವೇಳೆಗೆ, ರಕ್ಷಕರು ಅಪಘಾತದ ಸ್ಥಳದಿಂದ 21 ಶವಗಳನ್ನು ಹೊರತೆಗೆದಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಕೊನೆಯ ದೇಹವನ್ನು ಪಡೆಯಲು ಅವರು ತಮ್ಮ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದರು. ನೇಪಾಳದ ಪರ್ವತ ಪ್ರದೇಶದಲ್ಲಿ ಕಳೆದ ಭಾನುವಾರ ಬೆಳಗ್ಗೆ ಟರ್ಬೊಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ನಾಪತ್ತೆಯಾಗಿತ್ತು.

ವಿಮಾನಯಾನದ ವೆಬ್‌ಸೈಟ್‌ನ ಪ್ರಕಾರ ತಾರಾ ಏರ್ ನೇಪಾಳದ ಪರ್ವತಗಳಲ್ಲಿ ಹೊಸ ಮತ್ತು ಅತಿ ದೊಡ್ಡ ಏರ್‌ಲೈನ್ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ಇದು ಗ್ರಾಮೀಣ ನೇಪಾಳವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉದ್ದೇಶದಿಂದ 2009 ರಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿತು.

ಎವರೆಸ್ಟ್ ಸೇರಿದಂತೆ ವಿಶ್ವದ 14 ಎತ್ತರದ ಪರ್ವತಗಳಲ್ಲಿ ಎಂಟು ನೇಪಾಳದಲ್ಲಿ ವಾಯು ಅಪಘಾತಗಳು ಸಂಭವಿಸಿದ್ದವು. 2016 ರಲ್ಲಿ, ಅದೇ ಮಾರ್ಗದಲ್ಲಿ ಹಾರುತ್ತಿದ್ದ ಅದೇ ಏರ್‌ಲೈನ್‌ನ ವಿಮಾನವು ಟೇಕಾಫ್ ಆದ ನಂತರ ಪತನಗೊಂಡಾಗ ವಿಮಾನದಲ್ಲಿದ್ದ ಎಲ್ಲಾ 23 ಜನರು ಮೃತಪಟ್ಟಿದ್ದರು. ಮಾರ್ಚ್ 2018 ರಲ್ಲಿ, ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ US-ಬಾಂಗ್ಲಾ ವಿಮಾನ ಅಪಘಾತ ಸಂಭವಿಸಿತು, ವಿಮಾನದಲ್ಲಿದ್ದ 51 ಜನರು ಮೃತಪಟ್ಟಿದ್ದರು. 2012ರ ಸೆಪ್ಟೆಂಬರ್‌ನಲ್ಲಿ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ವೇಳೆ ಸೀತಾ ಏರ್ ವಿಮಾನ ಪತನಗೊಂಡು 19 ಮಂದಿ ಮೃತಪಟ್ಟಿದ್ದರು. ಮೇ 14, 2012 ರಂದು ಪೋಖರಾದಿಂದ ಜೋಮ್ಸಮ್‌ಗೆ ಹಾರುತ್ತಿದ್ದ ವಿಮಾನವು ಜೋಮ್ಸಮ್ ವಿಮಾನ ನಿಲ್ದಾಣದ ಬಳಿ ಪತನಗೊಂಡು 15 ಮಂದಿ ಮೃತಪಟ್ಟಿದ್ದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *