ANI
ಕಠ್ಮಂಡು: ನೆರೆಯ ರಾಷ್ಟ್ರ ನೇಪಾಳದಲ್ಲಿ ವಿಮಾನವೊಂದು ನಾಪತ್ತೆಯಾಗಿದ್ದು, 4 ಮಂದಿ ಭಾರತೀಯರು ಸೇರಿದಂತೆ ವಿಮಾನದಲ್ಲಿ 22 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.
ಟಾರಾ ಏರ್ ಸಂಸ್ಥೆಗೆ ಸೇರಿದೆ NAET ಡಬಲ್ ಎಂಜಿನ್ ವಿಮಾನ ನಾಪತ್ತೆಯಾಗಿದ್ದು, ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನಿ ಪ್ರಜೆಗಳು ಸೇರಿದಂತೆ 22 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿಮಾನವು ಭಾನುವಾರ ಬೆಳಗ್ಗೆ 9.55ಕ್ಕೆ ಪೋಕ್ರಾದಿಂದ ಹೊರಟಿದ್ದ ವಿಮಾನ ನಾಪತ್ತೆಯಾಗಿದೆ. ವಿಮಾನವು ಮುಸ್ತಂಗ್ ನ ಲೆಟೆಗೆ ಟೇಕ್ ಆಫ್ ಆಗಿತ್ತು. ಜಾಮ್ಸೋನ್ ಎಂಬ ಪ್ರದೇಶಕ್ಕೆ ತಲುಪಬೇಕಿತ್ತು. ಆದರೆ ಮಾರ್ಗ ಮಧ್ಯೆ ವಿಮಾನದ ಸಂಪರ್ಕ ಕಡಿತಗೊಂಡಿದ್ದು, ವಿಮಾನ ಅಪಘಾತಕ್ಕೀಡಾರುವ ಶಂಕೆ ಆರಂಭವಾಗಿದೆ.
ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ವಿಮಾನದಲ್ಲಿ ಸಿಬ್ಬಂದಿ ಸೇರಿ 22 ಜನರಿದ್ದರು ಎಂದು ವರದಿ ಮಾಡಿವೆ. ನೇಪಾಳ ರಾಜಧಾನಿ ಕಟ್ಮಂಡುವಿನಿಂದ 200 ಕಿ. ಮೀ. ದೂರದಲ್ಲಿ ವಿಮಾನ ನಾಪತ್ತೆಯಾಗಿದೆ. ಭಾನುವಾರ ಬೆಳಗ್ಗೆ 9.55ರ ಬಳಿಕ ವಿಮಾನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನೇಪಾಳ ಸೇನೆ ವಕ್ತಾರ ನಾರಾಯಣ ಸಿಲ್ವಾಲ್ ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App